ಕೈಕಾರದಲ್ಲಿ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಬ್ಯಾಂಕಿಂಗ್ ಶಾಖೆ ಶುಭಾರಂಭ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಬ್ಯಾಂಕಿಂಗ್ ಶಾಖೆಯು ಕೈಕಾರದಲ್ಲಿರುವ ಸಂಘದ ಬಿಲ್ಡಿಂಗ್‌ನಲ್ಲಿ ಅ.1 ರಂದು ಶುಭಾರಂಭಗೊಂಡಿತು. ಬ್ಯಾಂಕಿಂಗ್ ಶಾಖೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಿಕರಾದ ತ್ರಿವೇಣಿ ರಾವ್‌ರವರು ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಬ್ಯಾಂಕಿಂಗ್ ಸೇವೆಯನ್ನು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರು ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಶರತ್ ಡಿ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಎ, ಸಂತೋಷ್ ರೈ ಕೈಕಾರ, ನಿತೀಶ್ ಕುಮಾರ್ ಶಾಂತಿವನ, ರಘುರಾಮ ಪಾಟಾಳಿ, ಸೂರ್ಯನಾರಾಯಣ, ಸೂರಪ್ಪ ಯಂ, ರಾಮಕೃಷ್ಣ ನಾಯ್ಕ, ಸುಕುಮಾರ ಬಿ, ವಾರಿಜಾಕ್ಷಿ ಪಿ.ಶೆಟ್ಟಿ, ಉಷನಾರಾಯಣ ಹೆಚ್, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಶಾಖಾಧಿಕಾರಿ ರಾಜ್‌ಪ್ರಕಾಶ್ ರೈ, ಅಕೌಂಟೆಂಟ್ ವೀಣಾ ಕೆ ರೈ, ಗುಮಾಸ್ತರಾದ ರಾಜ್‌ಕಿರಣ್ ರೈ, ಭರತ್ ಎಸ್.ಎನ್, ಸಿಬ್ಬಂದಿಗಳಾದ ಉದಯಶಂಕರ ಕೆ.ಪಿ, ಶಾಂತ ಕುಮಾರ, ವೆಂಕಪ್ಪ, ಹರ್ಷಿತಾ ಕೆ, ಹರೀಶ್, ಆಶಿಕಾ ಮತ್ತು ಕರುಣಾಕರ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾದಿಕಾರಿ ರಾಜೀವಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ, ಪ್ರಥಮ ಗ್ರಾಹಕರಾದ ಶಿವರಾಮ ಶೆಟ್ಟಿ ಬಿಲ್ಲಾಜೆ, ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ನವೀನ್ ಕೈಕಾರ, ಪ್ರಮೋದ್ ಕೈಕಾರ, ರಘುರಾಮ ರೈ ಕೈಕಾರ, ಸುಂದರ ರೈ, ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ ಮತ್ತು ರೇಖಾ, ಮಾಜಿ ಸದಸ್ಯ ಶಶಿಕಿರಣ್ ರೈ ಮೊಡಪ್ಪಾಡಿ, ಕೈಕಾರ ಶಾಲಾ ಮುಖ್ಯಗುರು ರಾಮಣ್ಣ ರೈ, ಶಶಿರಾಜ್ ಚಿಲ್ಲೆತ್ತಾರು, ಸಂದೀಪ್ ರೈ ಚಿಲ್ಮೆತ್ತಾರು, ರಾಧಾಕೃಷ್ಣ ರೈ, ಯತೀಶ್ ಬಿಜತ್ರೆ, ರಾಮಚಂದ್ರ ಅಡಪ, ಬಾಲಕೃಷ್ಣ ರೈ ಪುಂಡಿಕಾಯಿ, ರಘುರಾಮ ಬಿಜತ್ರೆ, ಸುಧಾಕರ ರೈ ಕೈಕಾರ, ಜಯಕುಮಾರ್ ಕೈಕಾರ, ಸುಬ್ರಹ್ಮಣ್ಯ ಭಟ್ ಕೈಕಾರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ನಿರ್ದೇಶಕ ಸಂತೋಷ್ ರೈ ಕೈಕಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.

ವಾರದ 3 ದಿನ ಬ್ಯಾಂಕಿಂಗ್ ಸೇವೆ

ಕೈಕಾರ ಶಾಖೆಯಲ್ಲಿ ವಾರದ ಮೂರು ದಿನ ಗ್ರಾಹಕರಿಗೆ ಸೇವೆ ದೊರೆಯಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ವರೇಗೆ ಗ್ರಾಹಕರಿಗೆ ಸೇವೆ ದೊರೆಯಲಿದೆ. ಗ್ರಾಹಕರು ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here