ಪುತ್ತೂರು: ಇತ್ತೀಚೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ ಆಗಸ್ಟ್ 2022ರಲ್ಲಿ ಉತ್ತೀರ್ಣರಾದ ತರಬೇತಿದಾರರಿಗೆ, ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತು ಒದಗಿಸಿದ ರಾಷ್ಟೀಯ ವೃತ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಪುತ್ತೂರಿನ ಮಾನ್ಯ ಶಾಸಕರಾದ ಸಂಜೀವ ಮಠಂದೂರು, ಸಂಸ್ಥೆಯ ಸಂಚಾಲಕ ಯ.ಪಿ. ರಾಮಕೃಷ್ಣ, ದ. ಕ.ಗೌಡ ಸಂಘದ ಉಪಾಧ್ಯಕ್ಷ ಶ ಉಮೇಶ್ ಯಂ. ಪಿ. ಸಂಸ್ಥೆಯ ನಿರ್ದೇಶಕ ಚಿದಾನಂದ ಬೈಲಾಡಿ, ಯಸ್.ಆರ್.ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ, ಶುಭಹಾರೈಸಿ ಪ್ರಮಾಣ ಪತ್ರ ವಿತರಿಸಿದರು. ಹಳೇ ವಿದ್ಯಾರ್ಥಿ ನಿವೃತ್ತ ಯೋಧ ವಸಂತ ದೇವಸ್ಯರನ್ನು ಸನ್ಮಾನಿಸಲಾಯಿತು. ನಿವೃತ್ತ ಕಛೇರಿ ಅಧೀಕ್ಷಕ ಶ ಉಮೇಶ್ ಯಂ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯರಾದ ಶ ಪ್ರಕಾಶ್ ಪೈ.ಬಿ. ಪ್ರಸ್ತಾವನೆಗೈದು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕಾವ್ಯಶ್ರೀ ಮತ್ತು ದೀಕ್ಷಾ ಪ್ರಾರ್ಥಿಸಿದರು.ತರಬೇತಿ ಅಧಿಕಾರಿ ವಸಂತಿ ವಂದಿಸಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಮತ್ತು ತರಬೇತಿದಾರರು ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ನಾರಾಯಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.