ಪುತ್ತೂರು ನಟರಾಜ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ದಸರಾ ನಾಡಹಬ್ಬ ಸಮಿತಿ, ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗ ಇವರ ಸಹಯೋಗದಲ್ಲಿ ಅ. 2 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯತು.


ಪೂರ್ವಾಹ್ನ ಜರಗಿದ ಸತಿ ದಹನ ಯಕ್ಷಗಾನ ಹವ್ಯಕ ತಾಳಮದ್ದಳೆಯಲ್ಲಿ ಭಾಗವತರಾಗಿ ಪುತ್ತೂರು ರಮೇಶ್ ಭಟ್, ಗಿರೀಶ್ ಭಟ್ ಮುಳಿಯಾಲ, ಮೃದಂಗ ಮತ್ತು ಚೆಂಡೆಯಲ್ಲಿ ಗಣೇಶ್ ಭಟ್ ಬೆಳ್ಳಾರೆ, ಪಿ.ಜಿ.ಜಗನ್ನಿವಾಸ್ ರಾವ್, ರಾಮ ಪ್ರಸಾದ್ ವದ್ವ, ಅರ್ಥಧಾರಿಗಳಾಗಿ ಹಿರಣ್ಯ ವೆಂಕಟೇಶ್ವರ ಭಟ್, ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ ಭಟ್, ಪಶುಪತಿ ಶಾಸ್ತ್ರಿ, ಡಾ.ಹರೀಶ್ ಜೋಷಿ ವಿಟ್ಲ ಹಾಗೂ ಹರೀಶ್ ಬಳಂತಿಮೊಗರು ಭಾಗವಹಿಸಿದರು.


ಅಪರಾಹ್ನ ಜರಗಿದ ಅಗ್ನಿ ಪರೀಕ್ಷೆ – ಆಯೋಧ್ಯಾಗಮನ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿ, ರವಿಚಂದ್ರ ಭಟ್ ಪದ್ಯಾಣ, ಮೃದಂಗ ಮತ್ತು ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮಿನಾರಾಯಣ ಆಡೂರು, ರಾಮಮೂರ್ತಿ ಕುದ್ರೆಕೋಡ್ಲು, ರಾಜೇಂದ್ರ, ಅರ್ಥಧಾರಿಗಳಾಗಿ ಸೂರಿಕುಮೇರು ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಹಿರಣ್ಯ ವೆಂಕಟೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾi ಭಟ್, ಡಾ.ಹರೀಶ್ ಜೋಷಿ ವಿಟ್ಲರವರುಗಳು ಭಾಗವಹಿಸಿದರು. ಕಾರ್‍ಯಕ್ರಮದಲ್ಲಿ ದಸರಾ ನಾಡಹಬ್ಬ ಸಮಿತಿ, ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ಯಕ್ಷಗಾನ ಅಭಿಮಾನಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here