ಉಪ್ಪಿನಂಗಡಿ: ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಭಾನುವಾರ ಚಾಲನೆ ದೊರಕಿದ್ದು, ಬೆಳಗ್ಗೆ ಗಣಹೋಮ ನಡೆದು, ಸಂಜೆ 6:30ಕ್ಕೆ ಶ್ರೀ ಶಾರದ ಮಾತೆಯ ಪ್ರತಿಷ್ಠಾಪನೆ ನಡೆಯಿತು.
ಬಳಿಕ ರಾಮನಗರದ ಶ್ರೀ ಶಾರದಾ ವನಿತಾ ಭಜನಾ ಮಂಡಳಿಯ ವತಿಯಿಂದ ಭಜನಾ ಸೇವೆ ನಡೆಯಿತು. ರಾತ್ರಿ 8ಕ್ಕೆ ರಾತ್ರಿ ಪೂಜೆ ನಡೆದು, ಅನ್ನಸಂತರ್ಪಣೆ ನೆರವೇರಿತು. ಬಳಿಕ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ಏತ್ ಪಂಡಲಾ ಆತೆ…’ ನಾಟಕ ಪ್ರದರ್ಶನ ನೆರವೇರಿತು.
ಈ ಸಂದರ್ಭ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಕಾರ್ಯದರ್ಶಿ ಎನ್. ರಾಜಗೋಪಾಲ್ ಹೆಗ್ಡೆ, ಕೋಶಾಧಿಕಾರಿ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ರಘುರಾಮ ಎ. ರಾಮನಗರ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯರಾದ ಧನಂಜಯ ನಟ್ಟಿಬೈಲ್, ಶೋಭಾ ದಯಾನಂದ, ತಾ.ಪಂ. ಮಾಜಿ ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಪ್ರಮುಖರಾದ ಗಣೇಶ್ ಶೆಣೈ ಎನ್., ವಿಶ್ವನಾಥ ಶೆಣೈ, ದೀಪಕ್ ಪೈ, ಜಯರಾಮ ಆಚಾರ್ಯ, ಸಂದೇಶ್ ಶೆಣೈ, ಸಂದೀಪ್ ಶೆಣೈ, ಮಂಜುನಾಥ್ ಶೆಣೈ, ಪುಷ್ಪಲತಾ ಭಟ್, ಯೋಗೀಶ್ ಶೆಣೈ, ಗಣೇಶ್ ಆಚಾರ್ಯ, ಶ್ಯಾಮಲಾ ಶೆಣೈ, ಹೇರಂಭ ಶಾಸ್ತ್ರಿ, ಯು. ರಾಮ, ಅವಿನಾಶ್ ರಾಮನಗರ, ನಿತಿನ್ ರಾಮನಗರ, ನಿಶಾಂತ್, ಯತೀಶ್ ಶೆಟ್ಟಿ ಕೂಟೇಲು, ಸಚಿನ್, ನಿತೇಶ್ ಮತ್ತಿತರರು ಉಪಸ್ಥಿತರಿದ್ದರು.