ನೆಲ್ಯಾಡಿ: ಮಂಗಳೂರು ವಿವಿ ಘಟಕ ಕಾಲೇಜಿನ ಜಾಗ ಸರ್ವೆ

0

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜು ನಿರ್ಮಾಣಕ್ಕಾಗಿ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ ಮಂಜೂರುಗೊಂಡ ಸ್ಥಳದ ಸರ್ವೇ ಕಾರ್ಯವು ಇತ್ತೀಚೆಗೆ ನಡೆಯಿತು.

ಸುಮಾರು 24.40 ಎಕರೆ ಜಾಗ ಮಂಗಳೂರು ವಿವಿಯ ನೆಲ್ಯಾಡಿ ಘಟಕ ಕಾಲೇಜಿಗೆ ಮಂಜೂರುಗೊಂಡಿದ್ದು ಇಲ್ಲಿ ವಿ.ವಿ ಪದವಿ ಕಾಲೇಜ್, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಎಂ.ಎಡ್ ಕೋರ್ಸ್‌ಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಸಂಪೂರ್ಣ ಮೂಲ ಸೌಕರ್ಯವುಳ್ಳ ಸುಸಜ್ಜಿತ ಕ್ಯಾಂಪಸ್ ನಿರ್ಮಿಸುವ ಉದ್ದೇಶದಿಂದ ವಿಶಾಲವಾದ ಜಾಗವು ಜಿಲ್ಲಾಡಳಿತದಿಂದ ಮಂಜೂರುಗೊಂಡಿದ್ದು ಪ್ರಾಥಮಿಕ ಹಂತದ ಸರ್ವೇ ಕಾರ್ಯವು ಕಡಬ ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಸಂಪೂರ್ಣ ಗ್ರಾಮೀಣ ಪ್ರದೇಶವಾದ ನೆಲ್ಯಾಡಿಯ ಪರಿಸರದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳು ಸೇರಿದಂತೆ ಸುಸಜ್ಜಿತ ಕ್ಯಾಂಪಸ್ ಆರಂಭಗೊಳ್ಳುವುದು ಈ ಭಾಗದ ಉನ್ನತ ಶಿಕ್ಷಣದ ಕನಸನ್ನು ಹೊತ್ತ ಬಡ, ಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಒಂದು ಆಶಾಕಿರಣವಾಗಿ ಗೋಚರಿಸಲಿದೆ. ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ವಿಶ್ವವಿದ್ಯಾನಿಲಯ ಕಾಲೇಜ್‌ಗಳಲ್ಲಿ ಬೋಧಿಸಲಾಗುತ್ತಿದ್ದು ನಿಯಮಿತ ಬೋಧನ ಶುಲ್ಕದೊಂದಿಗೆ ಪರಿಪೂರ್ಣ ಶಿಕ್ಷಣವನ್ನು ಪಡೆಯುವ ಅವಕಾಶವೂ ಇದೆ.
ಸರ್ವೇ ಕಾರ್ಯ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಉಪ ರಿಜಿಸ್ಟ್ರಾರ್ ಹಾಗೂ ಎಸ್ಟೇಟ್ ಆಫೀಸರ್ ಹುಕ್ರಪ್ಪ ನಾಯ್ಕ್, ವಿ.ವಿ ಆಡಳಿತ ಸಂಯೋಜನಾಧಿಕಾರಿ ನವೀನ್‌ರಾಜ್, ನೆಲ್ಯಾಡಿ ಘಟಕ ಕಾಲೇಜ್ ಪ್ರಿನ್ಸಿಪಾಲ್ ಡಾ.ಜಯರಾಜ್, ವಿ.ವಿ ಹಿರಿಯ ಶ್ರೇಣಿ ಅಧಿಕಾರಿ ನಾಗರಾಜ್, ವಿ.ವಿ ಘಟಕದ ಕಿರಿಯ ಅಭಿಯಂತರ ದಿನೇಶ್ ಕುಮಾರ್, ದಿಲೀಪ್, ನೆಲ್ಯಾಡಿ ಘಟಕ ಕಾಲೇಜ್‌ನ ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here