ಕಡಬ: ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಆರೋಪಿಯ ಬಂಧನ

0

ಕಡಬ: ನೂಜಿಬಾಳ್ತಿಲದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಆರೋಪಿಯನ್ನು ಕಡಬ ಪೋಲೀಸರು ಬಂಧಿಸಿದ್ದಾರೆ.
ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್ ಬಂಧಿತ ಆರೋಪಿ. ಈತ ನೂಜಿಬಾಳ್ತಿಲದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಬಲತ್ಕಾರವಾಗಿ ಅತ್ಯಾಚಾರಗೈದಿರುವ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯು ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಆಕೆಯ ತಂದೆ ಇನ್ನೊಂದು ಮನೆಯಲ್ಲಿ ಬೇರೆಯಾಗಿ ವಾಸವಾಗಿರುತ್ತಾರೆ. ತಾಯಿ 5 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಾಸಗಿಲ್ಲ. ಆರೋಪಿಯು ಬಾಲಕಿಯ ಮನೆಯ ಪಕ್ಕದ ಜೋಬಿ ಎಂಬವರ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಬರುತ್ತಿದ್ದ. ಬಾಲಕಿಯ ಅಜ್ಜನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿಗೆ ಬಂದು ಬಾಲಕಿಯ ಮೊಬೈಲ್ ನಂಬರ್ ಕೇಳಿದ್ದ, ಅದಕ್ಕೆ ಬಾಲಕಿ ಕೊಡದೆ ಇದ್ದಾಗ ಆಕೆಯ ಅಜ್ಜನಿಂದ ನಂಬರ್ ಪಡೆದು ಆಕೆ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಕಾಲ್ ಮಾಡಿ ಆತನ ಬೈಕಿನಲ್ಲಿ ಬಲವಂತ ಮಾಡಿ ಕುಳ್ಳಿರಿಸಿಕೊಂಡು ಕಲ್ಲುಗುಡ್ಡೆ ಪೇಟೆಯಲ್ಲಿ ಬಿಟ್ಟು ಸಂಜೆ ಶಾಲೆಯಿಂದ ಮನೆಗೆ ಬರುವಾಗ ನನಗೆ ಫೋನ್ ಮಾಡು ಎಂದು ತಾಕೀತು ಮಾಡುತ್ತಿದ್ದ. ಸೆಪ್ಟೆಂಬರ್ 8 ರಂದು ಸಂಜೆ ಆರೋಪಿಯು ಬಾಲಕಿ ಇದ್ದ ಮನೆಗೆ ಬಂದು ಬಾಲಕಿಯ ಅಜ್ಜನಿಗೆ ಮದ್ಯ ಕುಡಿಸಿ ಬಾಲಕಿಯನ್ನು ಬಲವಂತವಾಗಿ ರೂಮಿಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಬೇರೆ ಹಾಕಿರುತ್ತಾನೆ. ಸೆಪ್ಟೆಂಬರರ್ 26 ರಂದು ಮನೆಯಲ್ಲಿ ಬಾಲಕಿಯ ತಾತ ಇಲ್ಲದಿರುವ ಸಂದರ್ಭ ಮತ್ತೊಮ್ಮೆ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಡಬ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

LEAVE A REPLY

Please enter your comment!
Please enter your name here