ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಶಾರದೆ ವಿಗ್ರಹದ ಶೋಭಾಯಾತ್ರೆ, ನವರಾತ್ರಿ ಸಂಪನ್ನ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪೂಜಿಸಲ್ಪಟ್ಟ ಶ್ರೀ ಶಾರದಾ ದೇವಿಯ ವಿಗ್ರಹ ಶೋಭಾಯಾತ್ರೆಯು ಅ.5ರಂದು ರಾತ್ರಿ ನಡೆಯಿತು.


ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ ನಡೆಯುತ್ತಿದ್ದು, ಅ.5ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಸಂಜೆ ಶ್ರೀದೇವಿಗೆ ಭಕ್ತಾದಿಗಳಿಂದ ಹರಕೆ ರೂಪದಲ್ಲಿ ನೀಡಲ್ಪಟ್ಟ ಸೀರೆಯ ಲಕ್ಕಿಡಿಪ್ ಡ್ರಾ ನಡೆಯಿತು. ಬಳಿಕ ಶ್ರೀ ದೇವಿಗೆ ಮಹಾಪೂಜೆ ನಡೆದು ವಿಗ್ರಹವನ್ನು ವಾಹನದ ಮೂಲಕ ದೇವಳದಲ್ಲಿ ಮೂರು ಸುತ್ತು ತಂದು, ಮುಖ್ಯರಸ್ತೆಯಲ್ಲಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೂಲಕ ಮೂಲಕ ದೇವರುಮಾರು ಗದ್ದೆ ಬಳಿಕ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು.

ವಜ್ರಮಾತಾ ಭಜನಾ ಮಂಡಳಿ ನೆಲ್ಲಿಕಟ್ಟೆ ವತಿಯಿಂದ ಮೆರವಣಿಗೆಯಲ್ಲಿ ಭಜನೆ ಹಾಡಲಾಯಿತು. ಈ ಸಂದರ್ಭದಲ್ಲಿ ಮಂದಿರದ ಅರ್ಚಕರಾದ ಹರಿಪ್ರಸನ್ನ ಸರೋಳಿತ್ತಾಯ, ಅಧ್ಯಕ್ಷ ಕೆ. ಸಾಯಿರಾಮ ರಾವ್, ಕಾರ್ಯದರ್ಶಿ ಕೆ. ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ ಎಚ್., ಉಪಾಧ್ಯಕ್ಷ ರಮೇಶ್ ಬಾಬು, ಜೊತೆ ಕಾರ್ಯದರ್ಶಿ ಯಶವಂತ ಆಚಾರ್ಯ, ಮಾಜಿ ಕೋಶಾಧಿಕಾರಿ ಪುಷ್ಪರಾಜ್ ಹೆಗ್ಡೆ, ಸದಸ್ಯರಾದ ಕಿರಣ್ ಉರ್ಲಾಂಡಿ, ರಮಾನಂದ ರಾವ್, ಅಶೋಕ್ ಕುಂಬ್ಲೆ, ಗೋಪಾಲ ಆಚಾರ್ಯ, ಲಕ್ಷ್ಮೀ ಹೊಟೇಲ್‌ನ ದೇವಪ್ಪ ನೋಂಡ, ಸುಧೀರ್ ನೋಂಡ, ಶ್ರೀಧರ ಆಚಾರ್ಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಮಹಾಲಿಂಗೇಶ್ವರ ದೇವಳದ ನಿತ್ಯಕರಸೇವಕರ ತಂಡದ ಸದಸ್ಯರಾದ ಸುಧೀರ್, ಕೃಷ್ಣಪ್ಪ, ವಸಂತ, ಪದ್ಮನಾಭ, ಅಶೋಕ್, ಗಿರೀಶ್, ಮಹಾಲಿಂಗೇಶ್ವರ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಪಕೀರ ಗೌಡ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಸಮೃದ್ಧಿ ಮ್ಯೂಸಿಕಲ್ ನಿರ್ದೇಶಕ ಶಿವಾನಂದ ಶೆಣೈ, ಭುಜಂಗ ಆಚಾರ್ಯ, ಪ್ರಜ್ಞೇಶ್, ಪ್ರಥಮ್, ಪ್ರಜ್ವಲ್, ಭರತ್, ಪ್ರವೀತ್, ಸಾಗರ್, ಆಯುಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here