ಪರಿಚಿತನ ಭೇಟಿಗೆಂದು ಮರ್ದಾಳಕ್ಕೆ ಬಂದಿದ್ದ ಮಂಗಳೂರಿನ ಯುವಕನಿಗೆ ಹಲ್ಲೆಗೈದು ಹಣ, ಮೊಬೈಲ್ ದರೋಡೆ-ದೂರು

0

ಕಡಬ:ಪರಿಚಯದ ವ್ಯಕ್ತಿಯೋರ್ವರ ಭೇಟಿಗೆಂದು ಮಂಗಳೂರಿನಿAದ ಬಂದಿದ್ದ ಯುವಕನಿಗೆ ಹಲ್ಲೆ ಮಾಡಿ ಪರ್ಸ್, ಮೊಬೈಲ್ -ೆÇÃನ್ ಹಾಗೂ ಮೋಟಾರ್ ಸೈಕಲನ್ನು ಕಿತ್ತುಕೊಂಡು ಬೆದರಿಕೆಯೊಡ್ಡಿರುವ ಘಟನೆ ನಡೆದಿರುವುದಾಗಿ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ಬಜಲ್ ನಿವಾಸಿ ಉಮರಬ್ಬ ಎಂಬವರ ಮಗ ಅಜರುದ್ದೀನ್(32ವ.)ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಅ.4ರಂದು ತನ್ನ ಪರಿಚಯದ ರಮೇಶ್ ಎಂಬಾತನನ್ನು ಭೇಟಿ ಮಾಡಲೆಂದು ನಾನು ಕಡಬ ತಾಲೂಕು ಮರ್ದಾಳಕ್ಕೆ ಬಂದಿದ್ದೆ.ಆದರೆ ರಮೇಶ್ ಸಿಗದೇ ಇದ್ದುದರಿಂದ ಮಂಗಳೂರಿಗೆ ವಾಪಸ್ ಹೋಗಲೆಂದು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಸ್ತೆಯಲ್ಲಿ ಮಂಗಳೂರು ಕಡೆಗೆ ನಾನು ಮೋಟಾರ್ ಸೈಕಲ್‌ನಲ್ಲಿ (ಕೆ.ಎ.19 ಇಎಕ್ಸ್-9085) ಹೋಗುತಿದ್ದಾಗ ರಾತ್ರಿ 9.30ರ ಸುಮಾರಿಗೆ ಮರ್ದಾಳ ಜಂಕ್ಷನ್‌ನಿAದ ಸುಮಾರು 1 ಕಿ.ಮೀ ದೂರದ ಬೊಳ್ಳೂರು ಕ್ರಾಸ್ ಬಳಿ ಬರುತ್ತಿದ್ದಂತೆ ರಸ್ತೆಯ ಎಡಬದಿಯಲ್ಲಿದ್ದ 3 ಜನ ಅಪರಿಚಿತ ಯುವಕರು ನನ್ನನ್ನು ತಡೆದು ನಿಲ್ಲಿಸಿ, ¾ನಿನ್ನಲ್ಲಿರುವ ಹಣವನ್ನು ಕೊಡು¿ ಎಂದು ಏರು ಧ್ವನಿಯಲ್ಲಿ ಕೇಳಿದರು.ಆದರೆ ನಾನು ಹಣ ಕೊಡಲು ನಿರಾಕರಿಸಿದಾಗ ಆರೋಪಿತರು ನನ್ನನ್ನು ಬಲವಂತವಾಗಿ ಹಿಡಿದುಕೊಂಡು ಕೈಯಿಂದ ಹಲ್ಲೆ ಮಾಡಿ ನನ್ನ ಪರ್ಸ್, ಮೊಬೈಲ್ -ÉÇÃನ್ ಹಾಗೂ ಮೋಟಾರ್ ಸೈಕಲ್‌ನ್ನು ಕಿತ್ತುಕೊಂಡು, ¾ನೀನು ಈ ವಿಷಯವನ್ನು ಯಾರಲ್ಲಾದರೂ ಹೇಳದರೆ ಅಥವಾ ಪೊಲೀಸ್ ಠಾಣೆಯಲ್ಲಿ ಕೇಸು ನೀಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ¿ ಎಂದು ಬೆದರಿಕೆ ಹಾಕಿರುತ್ತಾರೆಎಂದು ಅಜರುದ್ದೀನ್ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಆರೋಪಿಗಳ ವಿರುದ್ಧ ಕಲಂ 341.323.392.506 ಜೊತೆಗೆ 34 ಐಪಿಸಿ 1860ರಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನಿಟ್ರ‍್ಯಾಪ್ ಪ್ರಕರಣಕ್ಕೆ ತಿರುವು?: ಅ.4ರಂದು ಮರ್ದಾಳದ ಯುವಕರ ತಂಡವೊAದು ಮಂಗಳೂರಿನ ಯುವಕನೋರ್ವನನ್ನು ಮರ್ದಾಳಕ್ಕೆ ಕರೆಸಿ ಹಣ ವಸೂಲಿಗೆ ಯತ್ನಿಸಿತ್ತು.ಇದೊಂದು ಹನಿಟ್ರ‍್ಯಾಪ್ ಪ್ರಕರಣವಾಗಿದ್ದು ಈ ಸಂಬAಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಇದೇ ಪ್ರಕರಣ ತಿರುವು ಪಡೆದುಕೊಂಡಿದ್ದು ದರೋಡೆ ಆರೋಪದಲ್ಲಿ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

LEAVE A REPLY

Please enter your comment!
Please enter your name here