ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು : ವ್ಯವಹಾರದ ಚೆಕ್,ಇ-ಸ್ವತ್ತುಗಳ ಸಹಿ ಅಧಿಕಾರ ಪಿಡಿಒ,ಎಸ್‌ಡಿಎಎಗೆ

0

 

ಅಧ್ಯಕ್ಷರ ಅಧಿಕಾರ ಮೊಟಕು ಏಕೆ?:
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಲಾಗಿದ್ದ ಸಹಿ ಅಽಕಾರವನ್ನು ಹಿಂಪಡೆಯಲು ಸರ್ಕಾರ ಪ್ರಮುಖವಾಗಿ ಎರಡು ಕಾರಣಗಳನ್ನು ಪಟ್ಟಿ ಮಾಡಿದೆ.ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಲಂಚ ಪಡೆಯುವಾಗ ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.ಹಲವು ಪ್ರಕರಣಗಳಲ್ಲಿ ವಿಳಂಬವಾಗಿ ಬಿಲ್ ಪಾವತಿ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ.ಅಧ್ಯಕ್ಷರು ಚುನಾಯಿತ ಪ್ರತಿನಿಽಯಾಗಿದ್ದು, ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಸರ್ಕಾರಿ ನೌಕರರಾದ ಪಿಡಿಒ, ಎಸ್‌ಡಿಎಎ ಇದನ್ನು ನಿರ್ವಹಿಸಬೇಕು.ಒಂದು ವೇಳೆ ಪಂಚಾಯಿತಿಗಳಲ್ಲಿ ಎಸ್‌ಡಿಎಎ ಸ್ಥಾನ ಖಾಲಿ ಇದ್ದರೆ, ಪಿಡಿಒ ಜತೆಗೆ ಕಾರ್ಯದರ್ಶಿ ಜಂಟಿ ಸಹಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

  • ಉದ್ಯೋಗ ಖಾತ್ರಿ, ವಸತಿ ಯೋಜನೆಗಳ ಅನುಷ್ಠಾನ, ಹಣಕಾಸಿನ ನಿಧಿ, ಪಂಚಾಯತ್ ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಅಧ್ಯಕ್ಷರ ಸಹಿ ಅಧಿಕಾರ ಹಿಂಪಡೆಯಲು ನಡಾವಳಿ
  • ಬಿಲ್ ಪಾವತಿಗೆ ಲಂಚ ಸ್ವೀಕಾರ, ವಿಳಂಬ ಬಿಲ್ ಪಾವತಿ ಆರೋಪ ಚುನಾಯಿತ ಪ್ರತಿನಿಧಿಯಾಗಿರುವ ಅಧ್ಯಕ್ಷರು ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಪಿಡಿಒ, ಎಸ್‌ಡಿಎಎ ನಿರ್ವಹಿಸಬೇಕು
  • ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಗೆ, ಇ-ಸ್ವತ್ತು ಪರವಾನಿಗೆ ನೀಡುವ ಅಽಕಾರ ಪಿಡಿಒಗಳಿಗೆನೀಡಿದ ಬಳಿಕ ಗ್ರಾ.ಪಂ.ಸಭೆಯ ಗಮನಕ್ಕೆ ತರಲು ಸೂಚನೆ

ಬೆಂಗಳೂರು:ಗ್ರಾಮ ಪಂಚಾಯತ್ ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರಗಿಡಲು ಸರ್ಕಾರ ನಿರ್ಧರಿಸಿದ್ದು, ವ್ಯವಹಾರದ ಎಲ್ಲ ಚೆಕ್‌ಗಳಿಗೂ ಸಹಿ ಮಾಡುವ ಅಽಕಾರವನ್ನು ಗ್ರಾ.ಪಂ.ಅಭಿವೃದ್ಧಿ ಅಽಕಾರಿ(ಪಿಡಿಒ) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ(ಎಸ್‌ಡಿಎಎ)ರಿಗೆ ನೀಡುವ ಬಗ್ಗೆ ಸರಕಾರ ಆದೇಶ ಜಾರಿ ಮಾಡಿರುವುದಾಗಿ ವರದಿಯಾಗಿದೆ.ಈ ಸಂಬAಧ ರೂಪಿಸಲಾದ ನಡಾವಳಿಗಳನ್ನು ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಽನಿಯಮ-1993ರ ಪ್ರಕರಣಗಳಿಗೆ ತಿದ್ದುಪಡಿ ಮತ್ತು ಗ್ರಾಮ ಪಂಚಾಯಿತಿ ನೌಕರರ ಸೇವಾ ವಿಷಯಗಳ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಡಾವಳಿಗಳನ್ನು ರೂಪಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಯ ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಕ್ಕೆ 2006ರಲ್ಲಿ ತಂದಿದ್ದ ತಿದ್ದುಪಡಿಯಂತೆ ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸುವ ಅಽಕಾರಿಗಳು ಅಥವಾ ಪ್ರಾಽಕಾರ ನಿರ್ವಹಿಸಬಹುದು.ಇಂತಹ ಅಽಕಾರವನ್ನು ಇಲ್ಲಿಯವರೆಗೂ ಸ್ಥಳೀಯ ಆಡಳಿತದ ಚುನಾಯಿತ ಮುಖ್ಯಸ್ಥರಾದ ಅಧ್ಯಕ್ಷರಿಗೂ ನೀಡಲಾಗಿತ್ತು.ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಟಾನ, ಹಣಕಾಸಿನ ನಿಽ, ಪಂಚಾಯಿತಿ ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಹಿಂದೆ ಗ್ರಾ.ಪಂ.ಕಾರ್ಯದರ್ಶಿ ಪ್ರಸ್ತುತ ಪಂಚಾಯಿತಿ ಅಭಿವೃದ್ಧಿ ಅಽಕಾರಿ ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯವಾಗಿತ್ತು.ಈಗ ಸರ್ಕಾರ 2006ರಲ್ಲಿ ದತ್ತವಾದ ಅಽಕಾರವನ್ನು ಚಲಾಯಿಸಿ, ಅಧ್ಯಕ್ಷರ ಸಹಿ ಅಽಕಾರ ಹಿಂಪಡೆಯಲು ಹೊಸದಾಗಿ ನಡಾವಳಿ ರೂಪಿಸಿದೆ.
ತೆರಿಗೆ ನಿರ್ಧಾರ ಹೊಣೆಗಾರಿಕೆಯೂ ಮೊಟುಕು: ಇದುವರೆಗೂ ಗ್ರಾಮ ಪಂಚಾಯಿತಿ ನಿರ್ಣಯ ತೆಗೆದುಕೊಂಡ ನಂತರ, ಪಂಚಾಯಿತಿ ನಿರ್ಣಯ ಸಂಖ್ಯೆ, ದಿನಾಂಕ ನಮೂದಿಸಿ ಇ-ಸ್ವತ್ತು ತಂತ್ರಾAಶದ ಮೂಲಕ ತೆರಿಗೆ ನಿರ್ಧಾರ ಪಟ್ಟಿಗಳನ್ನು ವಿತರಿಸಲಾಗುತ್ತಿತ್ತು.ಪಂಚಾಯಿತಿ ಸಭೆಗಳು ಕಾಲಕಾಲಕ್ಕೆ ನಡೆಯದ ಕಾರಣ, ನಮೂನೆ ವಿತರಿಸುವ ಸಂಪೂರ್ಣ ಅಽಕಾರವನ್ನು ಪಿಡಿಒಗಳಿಗೇ ನೀಡಲಾಗಿದೆ.ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳಿದ್ದು, 91,437 ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ.
ಗ್ರಾ.ಪಂ.ಸದಸ್ಯರ ಅಽಕಾರವೂ ಮೊಟಕು ಲೈಸೆನ್ಸ್ ನೀಡಲು ಪಿಡಿಒಗೆ ಅಧಿಕಾರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೃಹ, ವಾಣಿಜ್ಯ ಕಟ್ಟಡ ಕಾಮಗಾರಿಗಳು, ಕೈಗಾರಿಕೆ, ಗಣಿಗಾರಿಕೆ, ಅಂಗಡಿ, ಹೋಟೆಲ್ ಮತ್ತಿತರ ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಗಿ, ಇ-ಸ್ವತ್ತು (ನಮೂನೆ-9, 11ಎ, 11ಬಿ) ನೀಡುವ ಕುರಿತು ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು.ಪಂಚಾಯತ್‌ರಾಜ್ ಕಾಯ್ದೆಯ 64ರಿಂದ 70ರವರೆಗಿನ ನಿಯಮಗಳಿಗೆ ತಿದ್ದುಪಡಿ ತಂದು ಪರವಾನಗಿ ನೀಡುವ ಅಽಕಾರವನ್ನೂ ಪಿಡಿಒಗಳಿಗೆ ನೀಡಲಾಗಿದೆ.ಪರವಾನಿಗೆ ನೀಡಿದ ನಂತರ ಸಭೆಯ ಗಮನಕ್ಕೆ ತರಲೂ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಸಭೆಗಳು ಸಕಾಲದಲ್ಲಿ ನಡೆಯದ ಕಾರಣ ವಿಳಂಬ ತಪ್ಪಿಸಲು ಇಂತಹ ಕ್ರಮ ಅನಿವಾರ್ಯ ಎಂದು ಆದೇಶದಲ್ಲಿ ವಿವರಿಸಲಾಗಿದೆ.

LEAVE A REPLY

Please enter your comment!
Please enter your name here