ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಡಿನ ಮಜಲು ಶ್ರೀ ಆದಿಪರಾಶಕ್ತಿ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಫ್ರೆಂಡ್ಸ್ ಕ್ಲಬ್ ಮಿತ್ತೂರು ಇವರು ಕೊಡುಗೆಯಾಗಿ ನೀಡಿದ ಪ್ರವೇಶದ್ವಾರವನ್ನು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಶ್ ಕೆ. ಎಸ್. ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಭಟ್, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರು, ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಪಂಚಾಯತ್ ಸದಸ್ಯ ಸಂಜೀವ ಪೂಜಾರಿ, ಇಡ್ಕಿದು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶಿವಪ್ರಕಾಶ್, ಮೊಂಟ ಮುಗೇರ, ಫ್ರೆಂಡ್ಸ್ ಕ್ಲಬ್ಬಿನ ಕಾರ್ಯದರ್ಶಿ ವಸಂತ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಈಶ್ವರಗೌಡ, ಕೋಶಾಧಿಕಾರಿ ಉಮೇಶ್ ಸುವರ್ಣ, ಸದಸ್ಯರಾದ ಮೋಹನ್ ಶೆಟ್ಟಿ, ವಾಸುದೇವ ಕುಲಾಲ್, ಸುಧಾಕರ ಗೌಡ, ಆನಂದ ನಾಯ್ಕ, ಈಶ್ವರ ಅಮೀನ್, ದಾಮೋದರ ಶೆಟ್ಟಿ, ಗಂಗಾಧರ ಸುವರ್ಣ, ಸುರೇಶ್ ಯಂ, ಸತೀಶ್ ಗೌಡ, ವಿನೋದ್ ಅಮೀನ್, ಜಗದೀಶ್ ಗೌಡ, ಮೋಹನ್ ಸುವರ್ಣ, ವಸಂತ ಅಮೀನ್, ವೆಂಕಪ್ಪ ಗೌಡ, ಸೋಮನಾಥ ಕುಲಾಲ್, ಕೃಷ್ಣ ಬಂಗೇರ, ದೇಜಪ್ಪ ಸಪಲ್ಯ, ಮಾರ್ಸಲ್ ಪಾಯಸ್, ಸಂಜೀವ ಮೂಲ್ಯ, ವಿನೋದ್, ಹರೀಶ್ ಮುಗೇರ, ರಾಮ ಮುಗೇರ, ಪದ್ಮನಾಭ ಮುಗೇರ, ಗುರುವ ಮುಗೇರ, ಲೋಕೇಶ್ ಪೂಜಾರಿ, ತುಕ್ರ ಮುಗೇರ, ಮಹೇಶ್ ಗೌಡ ದರ್ಬೆ, ತಾರಾನಾಥ ಕುಲಾಲ್, ವಿಜಯ ವಿಲ್ಸನ್, ಮಹಾಬಲ ಗೌಡ, ಪ್ರಶಾಂತ ಪೂಜಾರಿ, ಶ್ರೀನಿವಾಸ ಕುಲಾಲ್, ಅಶೋಕ್, ಜಗದೀಶ್ ಕುಲಾಲ್, ಪುರುಷೋತ್ತಮ ಗೌಡ, ನವೀನ್, ಜಯಂತ ಅಮೀನ್, ಯೋಗೀಶ್, ಮೊದಲಾದವರು ಉಪಸ್ಥಿತರಿದ್ದರು. ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.