ಉಪ್ಪಿನಂಗಡಿ: ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಟ್ಟ ಶ್ರೀ ಶಾರದಾ ದೇವಿಯ ವಿಗ್ರಹವನ್ನು ಅ.5ರಂದು ರಾತ್ರಿ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಲ್ಕು ದಿನಗಳ ಕಾಲ ವೈಭವದಿಂದ ನಡೆದ 28ನೇ ವರ್ಷದ ಶ್ರೀ ಶಾರದೋತ್ಸವವು ಸಂಪನ್ನಗೊಂಡಿತು.
ಅ.5ರಂದು ಬೆಳಗ್ಗೆ ಭಜನಾ ಕಾರ್ಯಕ್ರಮ, ಶ್ರೀ ದೇವಿಯ ಮುಂದೆ ಪ್ರಥಮ ಅಕ್ಷರ ಅಭ್ಯಾಸ ಕಲಿಕೆ, ಮಧ್ಯಾಹ್ನ ಮಹಾಪೂಜೆಯಾಗಿ ಹೊಸ ಅಕ್ಕಿ ಊಟದ ಸಂತರ್ಪಣೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮಗಳು ನಡೆದು, ಮಹಾಪೂಜೆಯಾಗಿ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು. ರಾಮನಗರದಿಂದ ಗಾಂಧಿಪಾರ್ಕ್- ಬ್ಯಾಂಕ್ ರಸ್ತೆ- ಶೆಣೈ ಆಸ್ಪತ್ರೆ- ಬಸ್ ನಿಲ್ದಾಣ ವೃತ್ತ- ರಥಬೀದಿಯಾಗಿ ಸಾಗಿದ ಶ್ರೀ ಶಾರದಾ ಮಾತೆಗೆ ಅಲ್ಲಲ್ಲಿ ಪೂಜೆ ನಡೆಯಿತು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರಕ್ಕೆ ಬಂದ ಶ್ರೀ ಶಾರದಾ ಮಾತೆಗೆ ಪೂಜೆ ನಡೆದು, ಬಳಿಕ ಸಂಗಮ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು. ಕೇರಳ ಚೆಂಡೆ, ಹುಲಿ ವೇಷಧಾರಿಗಳ ನರ್ತನ, ತಾಲೀಮು ಪ್ರದರ್ಶನ, ನಾಸಿಕ್ ಬ್ಯಾಂಡ್ ಹಾಗೂ ಕುಣಿತ ಭಜನಾ ತಂಡ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ, ತಾ.ಪಂ. ಮಾಜಿ ಸದಸ್ಯೆ ಸುಜಾತಕೃಷ್ಣ, ಬಿ.ಎಸ್.ಎ-ನ ನಿವೃತ್ತ ಉಪ ಕಮಾಂಡೆಂಟ್ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯ ಜಯಂತ ಪೊರೋಳಿ, ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಕಾರ್ಯದರ್ಶಿ ರಾಜಗೋಪಾಲ ಹೆಗ್ಡೆ, ಕೋಶಾಧಿಕಾರಿ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ರಘುರಾಮ ಎ. ರಾಮನಗರ, ಸ್ಥಾಪಕ ಸದಸ್ಯೆ ಪುಷ್ಪಲತಾ ಭಟ್ ಪೆರ್ನಾಜೆ, ನಿವೃತ್ತ ಯೋಧ ನಾರಾಯಣ ಹೆಗ್ಡೆ, ಪ್ರಮುಖರಾದ ಗಣೇಶ್ ಶೆಣೈ ಎನ್., ವಿಶ್ವನಾಥ ಶೆಣೈ, ದೀಪಕ್ ಪೈ, ಶಶಿಧರ ಹೆಗ್ಡೆ, ಸುಧಾಕರ ಶೆಟ್ಟಿ ಕೋಟೆ, ಅಶೋಕ್ ಕುಮಾರ್ ರೈ ನೆಕ್ಕರೆ, ಪುನೀತ್ ದಾಸರಮೂಲೆ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಉದಯಕುಮಾರ್ ಶೆಟ್ಟಿ ನಂದಿನಿನಗರ, ಜಯರಾಮ ಆಚಾರ್ಯ, ಯೋಗೀಶ್ ಶೆಣೈ, ಕೃಷ್ಣಪ್ಪ ಪೂಜಾರಿ, ಸಂದೇಶ್ ಶೆಣೈ, ಸಂದೀಪ್ ಶೆಣೈ, ಮಂಜುನಾಥ್ ಶೆಣೈ, ಗಣೇಶ್ ಆಚಾರ್ಯ, ಶ್ಯಾಮಲಾ ಶೆಣೈ, ಅವಿನಾಶ್ ರಾಮನಗರ, ನಿತಿನ್ ರಾಮನಗರ, ನಿಶಾಂತ್, ಯತೀಶ್ ಶೆಟ್ಟಿ ಕೂಟೇಲು, ಸಚಿನ್, ನಿತೇಶ್ ಮತ್ತಿತರರು ಉಪಸ್ಥಿತರಿದ್ದರು.