ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಚಿಂತನ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವತ್ಸಲಾ ನಾಯಕ್‌ರವರ ನೇತೃತ್ವದಲ್ಲಿ “ಚಿಂತನ” ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಸಾಂಸ್ಕೃತಿಕ ಕಾರ‍್ಯಕ್ರಮ ಅ. 5ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ದೇವಳದ ಆಡಳಿತ ಮಂಡಳಿ ಮೊಕ್ತೇಸರರಾದ ಡಾ| ಅಶೋಕ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ವೇದಮೂರ್ತಿ ದಿವಾಕರ ಭಟ್, ಉದ್ಯಮಿ ಅವಿನಾಶ್ ಭಂಢಾರ್‌ಕಾರ್, ಖ್ಯಾತ ಗಾಯಕ ಪಾಂಡುರಂಗ ನಾಯಕ್ ಪುತ್ತೂರು, ವಿಜಯ ಕುಮಾರಿ ಶೆಣೈ, ಶೈಲಾ ಪ್ರಭು, ವಸಂತ ನಾಯಕ್, ನರೇಂದ್ರ ಬಾಳಿಗ, ವಿದ್ಯಾ ಭಟ್, ಶೋಭಾ ಪ್ರಭು ಉಪಸ್ಥಿತರಿದ್ದು ಶುಭಹಾರೈಸಿದರು.

ಕಲಾವಿದೆ ಭಾರ್ಗವಿ ಶೆಣೈ ಪ್ರಾರ್ಥಿಸಿದರು. ವತ್ಸಲಾ ನಾಯಕ್ ಸ್ವಾಗತಿಸಿದರು. ಶ್ರೀಲತಾ ಹರೀಶ್ ಶೆಣೈ ವಂದಿಸಿದರು. ಸಾಯಿಕೃಪಾ ಕಾರ‍್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಮತ್ತು ಮಹಿಳೆಯರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here