





ವಿಟ್ಲ: ಅಲ್ಯೂಮಿನಿಯಂ ದೋಟಿ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೇಪು ಗ್ರಾಮದ ನಿರ್ಕಜೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಕೇಪು ಗ್ರಾಮದ ನಿರ್ಕಜೆ ನಿವಾಸಿ ಶೀನ ಗೌಡ(58 ವ.) ರವರು ಮೃತದುರ್ದೈವಿ.





ಮೃತರು ನೆರೆಮನೆಯಲ್ಲಿ ಅಲ್ಯೂಮಿನಿಯಂ ದೋಟಿ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರಿ, ಅಳಿಯ ಹಾಗೂ ಸೋದರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.









