ಬೆಟ್ಟಂಪಾಡಿ: ಫಾರೂಖ್ ಜುಮಾ ಮಸ್ಜಿದ್ ರೆಂಜ ಇದರ ಅಧೀನದಲ್ಲಿ ತಾಜುಲ್ ಹುದಾ ದರ್ಸ್, ಖುವ್ವತುಲ್ ಇಸ್ಲಾಂ ಮದ್ರಸ, ಮುಹಮ್ಮದೀಯ ಮದ್ರಸ ಗುಮ್ಮಟಗದ್ದೆ ವಿದ್ಯಾರ್ಥಿಗಳ ಕಲಾ- ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮವು ಅ. 6 ರಂದು ಮಸ್ಜಿದ್ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಫಾರೂಖ್ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಮಣ್ಣಾಪು ಇವರ ಅಧ್ಯಕ್ಷತೆಯಲ್ಲಿ ಮಸೀದಿ ಖತೀಬ ಮುಹಮ್ಮದ್ ಜುನೈದ್ ಸಖಾಫಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಮೀರ್ ಎಂಪೆಕಲ್, ಕೋಶಾಧಿಕಾರಿ ರಝಾಕ್ ನೂಜಿ, ಮದ್ರಸಾ ಸದರ್ ಮುಅಲ್ಲಿಂ ಮುಹಮ್ಮದ್ ಅಶ್ರಫ್ ಸಖಾಫಿ ಕುಂಬ್ರ, ಮುಅಲ್ಲಿಂ ನೌಶಾದ್ ಹಿಮಮಿ ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಕಳೆದ ವರ್ಷ ಮದರಸಾ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಅತ್ಯಂತ ಹೆಚ್ಚು ಹಾಜರಾತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸಮಾರೋಪ ಸಮಾರಂಭದಲ್ಲಿ ಮಸೀದಿ ಖತೀಬ ಮುಹಮ್ಮದ್ ಜುನೈದ್ ಸಖಾಫಿ, ಫಾರೂಖ್ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಮಣ್ಣಾಪು,ಮದ್ರಸಾ ಸದರ್ ಮುಅಲ್ಲಿಂ ಮುಹಮ್ಮದ್ ಅಶ್ರಫ್ ಸಖಾಫಿ ಕುಂಬ್ರ, ಮುಅಲ್ಲಿಂ ನೌಶಾದ್ ಹಿಮಮಿ,ಜಮಾಅತ್ ಕಮಿಟಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಮಣ್ಣಾಪು, ಪ್ರಧಾನ ಕಾರ್ಯದರ್ಶಿ ಅಮೀರ್ ಎಂಪೆಕಲ್, ಕೋಶಾಧಿಕಾರಿ ರಝಾಕ್ ನೂಜಿ, ಮುಹಮ್ಮದ್ ಹಾಜಿ ಮಣ್ಣಾಪು,ಮುಹಮ್ಮದ್ ಹಾಜಿ ಅಜ್ಜಿಕಲ್ಲು,ಮೂಸ ಚೆಲ್ಯಡ್ಕ, ಅರ್.ಕೆ ಮುಹಮ್ಮದ್, ಪುತ್ತುಚ್ಚ ಎಂಪೆಕಲ್ಲು, ಅಹಮದ್ ಸಾಹೆಬ್ ಅಜ್ಜಿಕಲ್ಲು ಅಝೀಝ್ ಅಜ್ಜಿಕಲ್ಲು, ಅಬ್ದುಲ್ಲಾ ಕುಂಞಿ ಮಾಸ್ಟರ್ ನೂಜಿ, ಅಬ್ದುಲ್ಲಾ ಕುಂಞಿ ಕಾವು, ಅಬ್ಬಾಸ್ ಮಂಜಲ್ ಕುಂಜ, ಅಲಿ ಚೂರಿಪದವು, ಇಬ್ರಾಹಿಂ ಟಿ, ಕಾಸಿಂ ಬಾರ್ತ ಕುಮೇರು, ಮೊಯ್ದು ಕುಂಞಿ ಕೋನಡ್ಕ, ಮುಂತಾದವರು ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡರು.