ಇಂದು ಸುದ್ದಿ ಕೃಷಿ ಕೇಂದ್ರದಲ್ಲಿ ತಜ್ಞ ಕೃಷಿಕರೊಂದಿಗೆ ಸಮಾಲೋಚನೆ, ಸಂವಾದ

0

ಪುತ್ತೂರು: ಸುದ್ದಿ ಕೃಷಿ ಕೇಂದ್ರದ ಆಶ್ರಯದಲ್ಲಿ ಅ. 9ರಂದು ಬೆಳಿಗ್ಗೆ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಬಿಲ್ಡಿಂಗ್‍ನ ಕೇಂದ್ರದ ಕಚೇರಿಯಲ್ಲಿ ತಜ್ಞ ಕೃಷಿಕರೊಂದಿಗೆ ಸಮಾಲೋಚನೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ಗೇರು ಹಾಗೂ ಕೊಕ್ಕೋ ಕೃಷಿಯ ಬಗ್ಗೆ ನಿವೃತ್ತ ಕೃಷಿ ವಿಜ್ಞಾನಿ ಡಾ. ಗಂಗಾಧರ್ ನಾಯಕ್ ಹಾಗೂ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಅವರು ಸಮಾಲೋಚನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಬಡಗನ್ನೂರು ದುರ್ಗಾಗಿರಿಯ ಮಂಜುನಾಥ್ ಫಾಮ್ರ್ಸ್‍ನ ಹರಿಕೃಷ್ಣ ಕಾಮತ್ ಅವರು ಮನೆ ಮನೆಯಲ್ಲಿ ಸಾವಯವ ತರಕಾರಿ, ಹಣ್ಣಿನ ಕೃಷಿ, ತಾರಸಿ ಗಾರ್ಡನ್ ವಿಷಯವಾಗಿ ಮಾಹಿತಿ ನೀಡಿ, ಆಸಕ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸಂಜೆ 4ರಿಂದ 4.30ರವರೆಗೆ ಬಲ್ನಾಡಿನ ಸತೀಶ್ ಗೌಡ ಅವರು ಬಸಳೆ ಕೃಷಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಸುದ್ದಿ ಕೃಷಿ ಕೇಂದ್ರ, ಕೃಷಿ ವಿಜ್ಞಾನಿ ಹಾಗೂ ಕೃಷಿ ತಜ್ಞರೊಂದಿಗೆ ಕೃಷಿಕರ ನೇರ ಮುಖಾಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೃಷಿ ವಿಜ್ಞಾನಿ ಹಾಗೂ ಕೃಷಿ ತಜ್ಞರು ಲಭ್ಯವಿರುವ ನಿಗದಿತ ದಿನ ಹಾಗೂ ಸಮಯದಂದು ಪ್ರಕಟಣೆ ನೀಡಿ, ಆಸಕ್ತರನ್ನು ಆಹ್ವಾನಿಸಲಾಗುವುದು. ಆಸಕ್ತರು ಇಲ್ಲಿಗೆ ಆಗಮಿಸಿ ತಮಗೆ ಅಗತ್ಯ ಮಾಹಿತಿ ಪಡೆಯುವ ಜೊತೆಗೆ ತಜ್ಞರು ಹಾಗೂ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲು ಅವಕಾಶವಿದೆ.

ಡಾ. ಗಂಗಾಧರ್ ನಾಯಕ್:
ಪುತ್ತೂರು ಗೇರು ಕೃಷಿ ನಿರ್ದೇಶನಾಲಯದ ನಿವೃತ್ತ ವಿಜ್ಞಾನಿ ಡಾ. ಗಂಗಾಧರ್ ನಾಯಕ್ ಅವರು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಹಾಪ್ರಬಂಧ ಮಂಡಿಸಿದ್ದಾರೆ. ಡಿಸಿಆರ್ ಇದರ ಪ್ರಭಾರ ಆಡಳಿತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ ಅನುಭವಿ. ಗೇರು ಕೃಷಿಯ ವಿವಿಧ ಮಜಲುಗಳ ಬಗ್ಗೆ ಕೆಲಸ ನಿರ್ವಹಿಸಿದ ಅನುಭವಿ.

ಕಡಮಜಲು ಸುಭಾಷ್ ರೈ:
ಗೇರು ಹಾಗೂ ಕೊಕ್ಕೋದಲ್ಲಿ ವಿಶೇಷ ಸಾಧನೆ ಮಾಡಿರುವ ಕಡಮಜಲು ಸುಭಾಷ್ ರೈ ಅವರು, ಸಮಗ್ರ ಕೃಷಿಯಲ್ಲೂ ಸಿದ್ಧಹಸ್ತರು. ಕೃಷಿಗೆ ಆಧುನಿಕ ಟಚ್ ನೀಡಿ, ಕಡಿಮೆ ಅವಧಿ, ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ತಮ್ಮ ಅನುಭವವನ್ನು ಸಾದಾರ ಪಡಿಸಲಿದ್ದಾರೆ.

ಹರಿಕೃಷ್ಣ ಕಾಮತ್:
60 ವಿವಿಧ ಬಗೆಯ ಗಡ್ಡೆಗಳನ್ನು ಬಡಗನ್ನೂರಿನ ದುರ್ಗಾಗಿರಿಯ ತಮ್ಮ ಮಂಜುನಾಥ ಫಾಮ್ರ್ಸ್‍ನಲ್ಲಿ ಬೆಳೆಸಿರುವ ಹರಿಕೃಷ್ಣ ಕಾಮತ್ ಅವರು, ಸಾವಯವ ತಾರಸಿ ಕೃಷಿಯಲ್ಲೂ ನಿಸ್ಸೀಮರು. ಮನೆ ಅಂಗಳದಲ್ಲೇ ವಿಷಮುಕ್ತ ತರಕಾರಿಯನ್ನು ಬೆಳೆಸುವ ಬಗ್ಗೆಯೂ ಮಾಹಿತಿ ನೀಡಬಲ್ಲವರು. ತರಕಾರಿ, ಹಣ್ಣು ಹಂಪಲು, ಸೊಪ್ಪು ತರಕಾರಿ, ಮನೆ ಅಂಗಳದಲ್ಲಿ ಮನೆಗೆ ಬೇಕಾದ ತರಕಾರಿ ಬೆಳೆಸುವ ಬಗೆಯನ್ನು ಸಮರ್ಥವಾಗಿ ತಿಳಿಯಪಡಿಸಬಲ್ಲವರಾಗಿದ್ದಾರೆ. ಹೂಕೋಸು, ಟೊಮೆಟೋ, ಕ್ಯಾಪ್ಸಿಕಮ್, ಬೀಟ್‍ರೂಟ್, ಬ್ರೊಕೋಲಿ, ಚಳಿಗಾಲದ ಕ್ಯಾಬೇಜ್ ಮೊದಲಾದ ತರಕಾರಿಗಳನ್ನು ಕುಂಡದಲ್ಲಿ ಬೆಳೆಸಬಹುದು ಎನ್ನುವುದನ್ನು ಇವರು ಸಾಬೀತುಪಡಿಸಿದ್ದಾರೆ.

ಸತೀಶ್ ಗೌಡ:
ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸತೀಶ್ ಗೌಡ ಅವರು, ಬಸಳೆ ಕೃಷಿಯಲ್ಲಿ ನೈಪುಣ್ಯತೆ ಸಾಧಿಸಿರುವ ಇವರು, ಅರ್ಧ ಎಕರೆ ಭೂಮಿಯಲ್ಲಿ ಬಸಳೆ ಬೆಳೆಸಿ ಲಾಭ ಗಳಿಸುವುದು ಹೇಗೆ ಎನ್ನುವ ವಿಚಾರದಲ್ಲಿ ಮಾಹಿತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here