ಭೂತಾನ್‍ನಿಂದ ಅಡಿಕೆ ಆಮದು ನಿರ್ಧಾರ ನಮ್ಮ ಅಡಿಕೆ ಬೆಳೆಗಾರರಿಗೆ ಮಾರಕ : ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ

0

 

  •  ಈಶಾನ್ಯ ರಾಜ್ಯಗಳ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಬರುತ್ತಿದೆ
  •  ಬಯಲು ಸೀಮೆಗಳಲ್ಲಿ ಅಡಿಕೆ ತೋಟ ನಿರ್ಮಾಣ ಆತಂಕಕಾರಿ
  •  ಅಕ್ರಮ ಸಾಗಾಟಕ್ಕೆ ಕೇಂದ್ರವೇ ರಹದಾರಿ ಮಾಡಿಕೊಟ್ಟಂತಾಗುತ್ತದೆ
  •  ಕನಿಷ್ಟ ಆಮದು ಬೆಲೆಯ ಉಲ್ಲಂಘನೆ ಅಗುತ್ತಿದೆ 

 

ಎಲ್ಲಿ ಯಾವ ಬೆಳೆ ಬೆಳೆಯಬೇಕೆನ್ನುವ ವಿಚಾರದಲ್ಲಿ ಸರ್ಕಾರ ಬಿಗಿ ನಿಲುವು ತೆಗೆದುಕೊಳ್ಳಬೇಕು
ಪಾರಂಪರಿಕ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ.ಇಂದು ನೀರಾವರಿ ಪ್ರದೇಶಗಳಲ್ಲಿ, ಭತ್ತ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ತೋಟ ಮಾಡಿದಾಗ ಕ್ಯಾಂಪ್ಕೋ ಹೋಗಿ ಇಲ್ಲಿ ಅಡಿಕೆ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ.ಇಲ್ಲಿ ಸರ್ಕಾರ ಬಿಗಿ ನಿಲುವು ತೆಗೆದುಕೊಳ್ಳಬೇಕು.ಜಪಾನ್‍ನಲ್ಲಿ ಯಾವ ಜಾಗದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ಸರ್ಕಾರ ನಿರ್ಧರಿಸುತ್ತದೆ.ಇಸ್ರೇಲ್ ಮಾದರಿಯಾಗಿದೆ.ಇಲ್ಲೆಲ್ಲಾ ನಿರ್ಧಿಷ್ಟ ಕ್ರಮವಿದೆ.ಆದರೆ ಭಾರತದಲ್ಲಿ ಅಂತಹ ಕ್ರಮವಿಲ್ಲ.ಆಂಧ್ರಪ್ರದೇಶದಂತಹ ಫಲವತ್ತಾದ ಮಣ್ಣಿನಲ್ಲಿ ಅಡಿಕೆ ಬೆಳೆದರೆ ಮುಂದೊಂದು ದಿನ ನಮ್ಮ ನಿಜವಾದ ಅಡಿಕೆ ಕೃಷಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.ಈ ನಿಟ್ಟಿನಲ್ಲಿ ಸರಕಾರ ಬಿಗಿ ನಿಲುವು ತೆಗೆದುಕೊಳ್ಳಬೇಕು

ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ

 

ಮಂಗಳೂರು:ಭೂತಾನ್‍ನಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡುವ ಬಗ್ಗೆ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ.ಬೇರೆ ಬೇರೆ ಪರಿಣಿತರು,ರಾಜಕೀಯ ವ್ಯಕ್ತಿಗಳು ತಮ್ಮದೇ ಆದ ಚಿಂತನೆಗಳನ್ನು ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.ಸರ್ಕಾರದ ಈ ಧೋರಣೆ ಮುಂದಿನ ದಿನಗಳಲ್ಲಿ ನಮಗೆ ಮಾರಕವಾಗಬಹುದು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಜೊತೆಗೆ ಮಾತನಾಡಿದ ಅವರು, 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲ.ಆದರೆ ಇಂದಿನ ಕನಿಷ್ಠ ಆಮದು ಬೆಲೆ 251 ರೂ. ಏನಿದೆಯೋ ಅದು ಇದಕ್ಕೆ ಅನ್ವಯವಾಗುತ್ತಿಲ್ಲ.ಇದು ದುರದೃಷ್ಟಕರ ವಿಚಾರ.ಕ್ಯಾಂಪೆÇ್ರೀ ಸಂಸ್ಥೆ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಸ್ಥಾಪನೆಗೊಂಡಿರುವ ಸಂಸ್ಥೆ.ಸಾಧ್ಯವಾದಷ್ಟು ಮಟ್ಟಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ.ಇದೀಗ ಕೇಂದ್ರದ ನಿಲುವನ್ನು ಖಂಡಿಸಿ ಈ ಬಗ್ಗೆ ಕೇಂದ್ರ ಸಚಿವರಿಗೆ, ಸಂಬಂಧಪಟ್ಟ ಅ„ಕಾರಿಗಳಿಗೆ ಜೊತೆಗೆ ಪ್ರಧಾನ ಮಂತ್ರಿಗಳಿಗೆ ಕೂಡ ಪತ್ರ ಬರೆಯಲಾಗಿದೆ.ಭೂತಾನ್ ಸರಕಾರಕ್ಕೆ ನೆರವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಂಡಿರುವ ಸರಕಾರದ ನಿರ್ಧಾರವು ನಮ್ಮ ಬೆಳೆಗಾರರಿಗೆ ಮಾರಕವಾಗುತ್ತದೆ.ಯಾಕೆಂದರೆ ಬರ್ಮಾ, ಬಾಂಗ್ಲಾದೇಶದ ಗಡಿಗಳಿಂದ ಅಕ್ರಮವಾಗಿ ಅಡಿಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಕೊಡ್ಗಿ ಹೇಳಿದರು.

ಈಶಾನ್ಯ ರಾಜ್ಯಗಳ ಮೂಲಕ ವಿದೇಶಗಳಿಂದ ಅಕ್ರಮ ಸಾಗಾಟ:ಶಿವಮೊಗ್ಗ, ಚೆನ್ನಗಿರಿ, ದಾವಣಗೆರೆಯಿಂದ ಕೆಂಪು ಅಡಿಕೆ ರೀತಿ ಅಕ್ರಮವಾಗಿ, ಯಾವುದೇ ತೆರಿಗೆಗಳನ್ನು ಕಟ್ಟದೆ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ಹೋಗುತ್ತಿವೆ.ಬೇರೆ ಬೇರೆ ದೇಶಗಳಿಂದ ಈಶಾನ್ಯ ರಾಜ್ಯಗಳ ಮುಖಾಂತರ ಅಕ್ರಮವಾಗಿ ಅಡಿಕೆ ಬರುತ್ತಲೇ ಇರುತ್ತದೆ.ಹಲವು ಬಾರಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದು ದಂಡ ವಿಧಿಸಿದ್ದಾರೆ.ಆದರೆ ಇದನ್ನು ಸಂ ಪೂರ್ಣವಾಗಿ ತಡೆಗಟ್ಟುವುದಕ್ಕೆ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.ಹೀಗಾಗಿ ಕಡಿಮೆ ಗುಣಮಟ್ಟದ ಅಡಿಕೆ ನಮ್ಮ ದೇಶಕ್ಕೆ ಬಂದು, ಇಲ್ಲಿ ಕರಾವಳಿ ಭಾಗದ ಚಾಲಿ ಅಡಿಕೆಯೊಂದಿಗೆ ಸೇರಿಕೊಂಡು ಕಡಿಮೆ ದರದಲ್ಲಿ ಗುಜರಾತ್, ನಾಗ್‍ಪುರ, ಉತ್ತರಪ್ರದೇಶದ ಮಾರುಕಟ್ಟೆಗಳಲ್ಲಿ ಬಿಕರಿಯಾಗುತ್ತಿದೆ.ಇದರಿಂದಾಗಿ ನಮ್ಮ ಅಡಿಕೆಗೆ ಬೇಡಿಕೆ ಕುಸಿತವಾಗುವ ಸಾಧ್ಯತೆ ಹೆಚ್ಚಿದೆ.ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ ಎಂದು ಕಿಶೋರ್ ಕುಮಾರ್ ಕೊಡ್ಗಿಯವರು ಹೇಳಿದರು.

ಮುಂದೊಂದು ದಿನ ನಾವು ದುರಂತ ಕಾಣಲಿದ್ದೇವೆ: ಭೂತಾನ್ ನಮ್ಮ ಮಿತ್ರರಾಷ್ಟ್ರ. ಆರ್ಥಿಕವಾಗಿ ಅವರಿಗೆ ನೆರವಾಗಬೇಕೆಂದಿದ್ದರೆ ಬೇರೆ ರೀತಿಯೇ ಮಾಡಬಹುದು.ಆದರೆ ನೇರಾನೇರ ಅಡಿಕೆಯನ್ನೇ ಇಲ್ಲಿಗೆ ತರುವ ಅಗತ್ಯವಿಲ್ಲ.ಯಾಕೆಂದರೆ ದೇಶದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ.ನಮಗೆ ಬೇಕಾದಷ್ಟು ಅಡಿಕೆ ನಾವೇ ಬೆಳೆಯುತ್ತಿದ್ದೇವೆ.ಮುಂದೊಂದು ದಿನ ನಾವು ದುರಂತ ಕಾಣಲಿದ್ದೇವೆ ಯಾಕೆಂದರೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಲಕ್ಷಾನುಗಟ್ಟಲೆ ಅಡಿಕೆ ಗಿಡ ನೆಟ್ಟು ತೋಟ ಮಾಡಲಾಗುತ್ತಿದೆ.ಜೊತೆಗೆ ಕರ್ನಾಟಕದಲ್ಲಿ ಬಯಲುಸೀಮೆ ಪ್ರದೇಶಗಳಲ್ಲಿ ಗುಡ್ಡಗಳಲ್ಲಿ ಕೊಳವೆಬಾವಿ ಕೊರೆಸಿ, ನೀರು ಪೂರೈಸಿ ಅಡಿಕೆ ತೋಟ ಮಾಡುತ್ತಿದ್ದಾರೆ.ಇದದಿಂದಾಗಿ ಪಾರಂಪರಿಕ ಅಡಿಕೆ ಕೃಷಿಕರ ಮೇಲೆ ದುಷ್ಪರಿಣಾಮ ಆಗಿಯೇ ಆಗುತ್ತದೆ.ಹೀಗಾಗಿ ಸರ್ಕಾರ ಕೆಲವೊಂದು ನಿರ್„ಷ್ಟ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅಡಿಕೆ ಬೆಳೆಗಾರರ ಪರವಾಗಿ ಕೇಳುತ್ತಿದ್ದೇನೆ ಎಂದರು.

ಅಡಿಕೆ ಆಮದು ಅಗತ್ಯವಿಲ್ಲ: ಭೂತಾನ್, ಬರ್ಮಾದಿಂದ ಆಮದು ಮಾಡಿಕೊಳ್ಳುವ ಅಗತ್ಯ ಅಡಿಕೆಯ ಮಟ್ಟಿಗೆ ಇಲ್ಲ.ನಮ್ಮಲ್ಲಿಯೇ ಬೇಕಾದಷ್ಟಿದೆ.ನಮ್ಮ ಜನರಿಗೆ ಬೇಕಿರುವಷ್ಟು ನಾವೇ ಬೆಳೆಯುತ್ತಿದ್ದೇವೆ.ನಾವೇ ರಫ್ತು ಮಾಡುವ ಶಕ್ತಿ ಬೆಳೆಯುತ್ತಿದೆ.ಹೀಗಿರುವಾಗ ಈ ಧೋರಣೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯಿಂದ 4-5 ಸಾವಿರ ಮೆಟ್ರಿಕ್ ಟನ್‍ನಷ್ಟು ಕೆಂಪು ಅಡಿಕೆ ಬರುತ್ತದೆ.ಮಾತ್ರವಲ್ಲ, ಕಳ್ಳಮಾರ್ಗವಾಗಿ ಬರ್ಮಾ, ಬಾಂಗ್ಲಾದಿಂದ ಬರುವ ಸಾಧ್ಯತೆಯಿದೆ.ಇದಕ್ಕೆಲ್ಲಾ ರಹದಾರಿ ಸರಕಾರವೇ ಮಾಡಿ ಕೊಟ್ಟಂತಾಗುತ್ತದೆ.ನಮ್ಮದೇ ಸರಕಾರ ನಾವೇ ಮಾಡಿದ ಕಾನೂನನ್ನು ನಾವೇ ಉಲ್ಲಂಸಿಕೊಂಡು ಯಾವುದೋ ದೇಶದ ಜನರಿಗೆ ಉಪಕಾರ ಮಾಡುವ ಮನೋಭಾವ ಒಳ್ಳೆಯದಲ್ಲ ಎನ್ನುವುದು ನನ್ನ ಸ್ಪಷ್ಟ ನಿಲುವು.ಕೇಂದ್ರ ಸರಕಾರವು ನಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುವ ಕಾನೂನು ತರಬಹುದು ಎನ್ನುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

LEAVE A REPLY

Please enter your comment!
Please enter your name here