ಅ.10: ಇರ್ದೆ-ಬೆಟ್ಟಂಪಾಡಿಯಲ್ಲಿ ಗಾಂಧಿ ನಡಿಗೆ

0

ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜಯಂತಿ ಅಂಗವಾಗಿ ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ಗಾಂಧಿ ನಡಿಗೆ ಗಾಂಧಿ ಪಥದಲ್ಲಿ ಧ್ವೇಷಮುಕ್ತ ಭಾರತಕ್ಕಾಗಿ ಗಾಂಧಿ ಪಥದಲ್ಲಿ ಹೆಜ್ಜೆ ಹಾಕೋಣ ಎಂಬ ಧ್ಯೇಯವಾಕ್ಯದಡಿಯಲ್ಲಿ ಗಾಂಧಿ ನಡಿಗೆಯು ಅ.10ರಂದು ಅಪರಾಹ್ನ 3 ಗಂಟೆಗೆ ಇರ್ದೆ-ಬೆಟ್ಟಂಪಾಡಿಯಲ್ಲಿ ನಡೆಯಲಿದೆ.
ಗಾಂಧಿ ನಡಿಗೆಯು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಚೇರಿಯ ಬಳಿಯಿಂದ ಹೊರಟು ಇರ್ದೆ  ಗಾಂಧಿಕಟ್ಟೆಯ ತನಕ ನಡೆಯಲಿದೆ. ತಾಲೂಕು, ಜಿಲ್ಲಾ ಮಟ್ಟದ ಪಕ್ಷದ ವಿವಿಧ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಯೋಜಕ ನವೀನ್ ರೈ ಚೆಲ್ಯಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here