ಗ್ರಾಮದ ಅಭಿವೃದ್ದಿಯಲ್ಲಿ ರಾಜಕೀಯ ರಹಿತ ಸೇವೆ ಮಾಡಿ- ಬೂಡಿಯಾರ್ ರಾಧಾಕೃಷ್ಣ ರೈ
ಪುತ್ತೂರು :- ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಮಾಲೋಚನ ಸಭೆಯು ಅ. 10 ರಂದು ಜರಗಿತು.
ಸಂಘದ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಗ್ರಾಮದ ಅಭಿವೃಧ್ದಿಯಲ್ಲಿ ಯಾವುದೇ ರಾಜಕೀಯ ಮಾಡಬಾರದು. ಎಲ್ಲಾ ಧರ್ಮ ಜಾತಿಯವರನ್ನು ಒಟ್ಟುಗೂಡಿಸಿ ಬಲಿಷ್ಟ ಸಂಘಟನೆಯ ಮೂಲಕ ಗ್ರಾಮಸ್ಥರ ಸೇವೆ ಮಾಡಬೇಕು ಈ ನಿಟ್ಟಿನಲ್ಲಿ ತಾನು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಸಂಘದ ಅಧ್ಯಕ್ಷ ಗಣೇಶ್ ರೈ ಬೂಡಿಯಾರ್ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಹಿರಿಯ ವಿಧ್ಯಾರ್ಥಿ ಸಂಘದಿಂದ ಮುಂದೆ ನಡೆಸುವ ಕಾರ್‍ಯಕ್ರಮಗಳ ಕುರಿತು ಚರ್ಚಿಸಲಾಯಿತು.
ವೇದಿಕೆಯಲ್ಲಿ ಸಂಘದ ಕಾರ್‍ಯಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲು, ಸಂಚಾಲಕ ವಿಜಯಹರಿ ರೈ ಬಳ್ಳಮಜಲು, ಕಾರ್‍ಯದರ್ಶಿ ಜಯರಾಮ ರೈ ಅಡ್ಯೆತ್ತಿಮಾರು ಹಾಗೂ ಸುರೇಂದ್ರ ರೈ ಬಳ್ಳಮಜಲುರವರು ಉಪಸ್ಥಿತರಿದ್ದರು.
ಮುಂದಿನ ೨ ವರ್ಷದ ಅವಧಿಗೆ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಬೂಡಿಯರ್ ರಾಧಾಕೃಷ್ಣ ರೈ, ಕಾರ್‍ಯಾಧ್ಯಕ್ಷರಾಗಿ ಶಿವರಾಮ ಆಳ್ವ ಬಳ್ಳಮಜಲು, ಸಂಚಾಲಕರಾಗಿ ವಿಜಯಹರಿ ರೈ ಬಳ್ಳಮಜಲು, ಗೌರವ ಸಲಹೆಗಾರರಾಗಿ ಸುರೇಂದ್ರ ರೈ ಬಳ್ಳಮಜಲು ಮತ್ತು ಸತೀಶ್ ರೈ ಡಿಂಬ್ರಿ, ಅಧ್ಯಕ್ಷರಾಗಿ ಗಣೇಶ್ ರೈ ಬೂಡಿಯಾರ್, ಉಪಾಧ್ಯಕ್ಷರಾಗಿ ಶಶಿಧರ್ ಕಿನ್ನಿಮಜಲು, ಧನರಾಜ್ ಅಲೆಕಿ, ಕಾರ್‍ಯದರ್ಶಿಯಾಗಿ ಜಯರಾಮ ರೈ ಅಡ್ಯೆತ್ತಿಮಾರು, ಕೋಶಾಧಿಕಾರಿಯಾಗಿ ಹರೀಶ್ ಡಿಂಬ್ರಿ, ಜೊತೆ ಕಾರ್‍ಯದರ್ಶಿಯಾಗಿ ಯಮುನಾ ನಾರಾಯಣ, ಬಾಗ್ಯಶ್ರೀ ರೈ ಹಾಗೂ ಕಾರ್‍ಯಕಾರಿ ಸಮಿತಿ ಸದಸ್ಯರಾಗಿ ಸಂಕಪ್ಪ ಎಮ್ ಕುರಿಯ, ಸೂಪಿ ಕುರಿಯ ,ಸುಂದರ ಬೊಳಂತಿಮಾರ್ , ಮನೋಜ್ ಹೊಸಮಾರ್ ,ಗಣೇಶ್ ರೈ ಬಳ್ಳಮಜಲು ,ಪುರಂದರ ಶಿಬರಾಡಿ, ಜಯರಾಮ್ ವಿಷ್ಣುನಗರ, ಯಶೋದರ ವಿಷ್ಣುನಗರ, ನವೀನ್ ಪಡ್ಪು, ಉಮೇಶ್ ನಾಯಕ್ ಕುರಿಯ, ಮನೋಜ್ ಗಡಾಜೆ , ಜಗನ್ನಾಥ ರೈ ಅಡ್ಯೆತ್ತಿಮಾರು, ಬಾಬು ಕೆ. ಮಾವಿನಕಟ್ಟೆ ಯವರನ್ನು ಆಯ್ಕೆಗೊಳಿಸಲಾಯಿತು.
ಅಧ್ಯಕ್ಷ ಗಣೇಶ್ ರೈ ಬೂಡಿಯಾರ್ ಸ್ವಾಗತಿಸಿ, ಕೋಶಾಧಿಕಾರಿ ಹರೀಶ್ ಡಿಂಬ್ರಿ ವಂದಿಸಿದರು. ಸಭೆಯಲ್ಲಿ ಹಿರಿಯ ವಿಧ್ಯಾರ್ಥಿಗಳಾದ ರಂಜಿತ್, ವಿನೋದ್ ಶಿಬರಾಡಿ , ದಿನೇಶ್ ಸಾಲಿಯಾನ್, ಉಮೇಶ್ ಕಿನ್ನಿಮಜಲು, ಚಿದಾನಂದ ಹೊಸಮಾರು , ಮಹಾಬಲ ರೈ ಕುಕ್ಕುಂಜೊಡು ,ಆನಂದ ರೈ ಡಿಂಬ್ರಿ , ಚಂದ್ರಹಾಸ ರೈ ಡಿಂಬ್ರಿ , ಗೌರವ್ ವಿ?ನಗರ , ರಂಜಿತ್ ಕೆ, ನಾರಾಯಣ ಕೊಡ್ಲಾರು, ಶ್ರೀಕೃಷ್ಣಬೊಳಂತಿಮಾರ್, ರಂಜಿತ್ ಎಂ, ಸುಂದರ ಬೊಳಂತಿಮಾರು, ಶಿವರಾಮ ಶಿಬರಾಡಿ , ಧನಂಜಯ ರೈ ಅನಾಜೆ , ಸುಪ್ರೀತ್ ಕುಮಾರ್, ಶ್ರೀನಿವಾಸ ನಾಯ್ಕ , ಸುಮ ಜಗನ್ನಾಥ ರೈ ಅಡ್ಯೆತ್ತಿಮಾರು, ಸುರೇಶ್ ಕಿನ್ನಿಮಜಲು, ರಾಜೇಶ್ ಕೈಂತಿಲ ಹಾಗೂ ಹಲವಾರು ಹಿರಿಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.