ಆಧುನಿಕ ಕೃಷಿ ಯಂತ್ರೋಪಕರಣಗಳ ಮಳಿಗೆ ಓಂಕಾರ್ ಆಗ್ರೋ ಇಂಪೆಕ್ಸ್‌ನಿಂದ ರೈತರಿಗೆ ಸಿಗಲಿದೆ ತ್ವರಿತ ಸೇವೆ

0

ಪುತ್ತೂರು : ಮೂಲ ಕಸುಬು ಕೃಷಿಗೆ ಬಳಕೆಯಾಗುವಂತಹ ಹಲವು ಮಾದರಿಯ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೆಸರಾಂತ ಕಂಪೆನಿಗಳ ಬಗೆ-ಬಗೆಯ ಯಂತ್ರೋಪಕರಣಗಳ ಮಾರಾಟ ಮತ್ತು ಅವುಗಳ ದುರಸ್ತಿ ಮಾಡೋ ಕೆಲಸವನ್ನು ತ್ವರಿತ ರೀತಿಯಲ್ಲಿ ರೈತ ವರ್ಗಕ್ಕೆ ಒದಗಿಸುವ ಸಲುವಾಗಿ, ನುರಿತ ಕಾರ್ಮಿಕ ತಂಡ ಹೊಂದಿರುವ ವಿನೂತನ ಸಂಸ್ಥೆ ಓಂಕಾರ್ ಆಗ್ರೋ ಇಂಪೆಕ್ಸ್, ಪಡೀಲ್ ಕೊಟೇಚಾ ಹಾಲ್ ಮುಂಭಾಗದ ಕುಂಞ ಸಂಕೀರ್ಣದಲ್ಲಿ ಪ್ರಾರಂಭಗೊಂಡಿದೆ. ಕೃಷಿ ಚಟುವಟಿಕೆ ಕಾರ್ಯದಲ್ಲಿ ಅತೀ ಮುಖ್ಯವಾಗಿ ರೈತರ ನೆರವಿಗೆ, ಉಪಯೋಗಕ್ಕೆ ಬರುವಂತಹ ಹುಲ್ಲು ಕಟಾವು ಯಂತ್ರಗಳು, ಮರ ಕತ್ತರಿಸುವ ಯಂತ್ರಗಳು, ಕೀಟನಾಶಕಗಳನ್ನು ಸಿಂಪಡಿಸುವ ಯಂತ್ರಗಳು, ಕಾರ್ ವಾಷಿಂಗ್ ಸಾಮಾಗ್ರಿಗಳು, ಪೈಪುಗಳ ಸಹಿತ ಬಿಡಿಭಾಗಗಳೂ ಇಲ್ಲಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಹೆಸರಾಂತ ಪ್ರಮುಖ ಕಂಪೆನಿಗಳ ಯಂತ್ರೋಪಕರಣಗಳು, ಬಿಡಿಭಾಗಗಳು, ಅದೇ ರೀತಿಯಲ್ಲಿ ಅದರ ದುರಸ್ತಿ ಕಾರ್ಯ ಕೂಡ ನಿಗದಿತ ಅವಽಯೊಳಗೆ ಗ್ರಾಹಕರಿಗೆ ದೊರೆಯಲಿದೆ. ಮಾಲಕರು ಓಂಕಾರ್ ಆಗ್ರೋ ಇಂಪೆಕ್ಸ್, ಪಡೀಲ್ ಮೊಬೈಲ್ :9449463921.

LEAVE A REPLY

Please enter your comment!
Please enter your name here