ಪುತ್ತೂರು ತಾಲೂಕಿನಲ್ಲಿ 1700 ನಾಯಿಗಳಿಗೆ ಲಸಿಕೆ ವೈದ್ಯಾಧಿಕಾರಿ ಹೆಬ್ಬಾರ್
ಪುತ್ತೂರು ದ ಕ ಜಿಲ್ಲಾ ಪಂಚಾಯತ್ ಮತ್ತು ಪುತ್ತೂರು ತಾಲೂಕು ಪಶುಸಂಗೋಪನಾ ಇಲಾಖೆ ವತಿಯಿಂದ ಸೆ. 21 ರಿಂದ 10 ದಿನಗಳ ಕಾಲ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಹುಚ್ಚು ನಾಯಿ ನಿರೋಧಕ ಲಸಿಕಾ ಅಭಿಯಾನದಲ್ಲಿ ಒಟ್ಟು 1700 ನಾಯಿಗಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಪುತ್ತೂರು ತಾಲೂಕು ಪಶು ವೈದ್ಯಾಧಿಕಾರಿ ಡಾ. ಪ್ರಸನ್ನ ಹೆಬ್ಬಾರ್ ತಿಳಿಸಿದ್ದಾರೆ.
ಪುತ್ತೂರು ನಗರ, ಉಪ್ಪಿನಂಗಡಿ, ಕೋಡಿಂಬಾಡಿ, ಬಲ್ನಾಡು, ಮುಂಡೂರು, ಕೆದಂಬಾಡಿ ಬಡಗನ್ನೂರು, ಒಳಮೊಗ್ರು , ಬೆಟ್ಟಂಪಾಡಿ, ಪಾಣಾಜೆ, ಕೊಳ್ತಿಗೆ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳಲ್ಲಿ ಅಭಿಯಾನ ನಡೆಸಲಾಗಿದೆ. ಸಾಕು ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆಯನ್ನು ಹಾಕಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ರೇಬಿಸ್ ಕಾಯಿಲೆಯ ಬಗ್ಗೆ ಜನ ಜಾಗೃತಿಮೂಡಿಸುವ ಕಾರ್ಯವನ್ನು ನಡೆಸಲಾಗಿದೆ.
ಅಭಿಯಾನದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಎಂ ಪಿ ಪ್ರಕಾಶ್, ಜಾನುವಾರು ಅಭಿವೃದ್ದಿ ಅಧಿಕಾರಿ ಹೊನ್ನಪ್ಪ ಗೌಡ, ಪಾನಜೆ ಜಾನುವಾರು ಅಧಿಕಾರಿ ಪುಷ್ಪರಾಜ್, ಬಲ್ನಾಡು ಹಿರಿಯ ಪಶು ವೈದ್ಯಕೀಯ ಪರಿಕ್ಷಕ ಮೋಹನ್‌ದಾಸ್, ಕೌಡಿಚ್ಚಾರ್‌ನ ಹಿರಿಯ ಪಶು ವೈದ್ಯಕೀಯ ಪರಿಕ್ಷಕರಾದ ವೀರಪ್ಪ, ಪ್ರಶಾಂತ್, ಬಸವರಾಜ್, ತಿಂಗಳಾಡಿ ಪಶು ವೈದ್ಯಕೀಯ ಪರೀಕ್ಷಕ ಕುಮಾರ್, ಪುತ್ತೂರಿನ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಪುಂಡರೀಕಾಕ್ಷ ಭಾಗವಹಿಸಿದ್ದರು.