ವೈದ್ಯರ, ಸಿಬ್ಬಂದಿಗಳ ಬಾಂಧವ್ಯಕ್ಕೆ ಮಾದರಿಯಾದ ಆದರ್ಶ ಆಸ್ಪತ್ರೆ
ಪುತ್ತೂರು: ಹಿರಿಯರಿಗೆ ಹುಟ್ಟು ಹಬ್ಬದ ದಿನವೆಂದರೆ ಆತ್ಮಾವಲೋಕನದ ದಿನವಾಗಿರಬೇಕು. ಕಳೆದ ವರ್ಷದಲ್ಲಿ ತನ್ನಲ್ಲಿ ಎಷ್ಟು ಒಳ್ಳೆಯ ಬದಲಾವಣೆಗಳು ಆಗಿವೆ ಎಂದು ನೋಡುವ ದಿನವಿದು. ದೇವರು ನಮ್ಮ ಮೇಲೆ ಮಾಡಿದ ಕೃಪೆಗೆ ಕೃತಜ್ಞತೆ ವ್ಯಕ್ತಪಡಿಸುವ ದಿನ, ಮತ್ತು ನಮ್ಮಿಂದಾದ ತಪ್ಪುಗಳಿಗೆ ಕ್ಷಮೆ ಯಾಚಿಸುವ ದಿನ ! ಅಂತರ್ಮುಖರಾಗಿ ಮುಂದಿನ ವರ್ಷದಲ್ಲಿ ಇನ್ನಷ್ಟು ಒಳ್ಳೆಯವರಾಗಲು ಸಂಕಲ್ಪ ಮಾಡುವ ದಿನ. ಇಂತಹ ಸನ್ನಿವೇಶವೊಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಹಿರಿಯ ನೌಕರರೊಬ್ಬರಿಂದ ನಡೆದಿದೆ.
ಆಸ್ಪತ್ರೆಯ ಹಿರಿಯ ಚೇತನ ಸೆಕ್ಯೂರಿಟಿ ಗಾರ್ಡ್ ಆಗಿರುವ ಕಾಮರಾಜನ್ ಅವರ 86ನೇ ಹುಟ್ಟು ಹಬ್ಬದ ಆಚರಣೆಯನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿಕೊಂಡು ಮಾಡಿದ್ದಾರೆ. ಈ ಸಂದರ್ಭ ನೌಕರ ಕಾಮರಾಜನ್ ಅವರು ಭಾವುಕರಾಗಿ ಆತ್ಮಾವಕಲೋಕನ ಮಾಡಿ ಸಂತೋಷದ ಕ್ಷಣವನ್ನು ಆನಂದಿಸಿದರು. ಸೆಕ್ಯೂರಿಟಿ ಕಾಮರಾಜನ್ ಅವರು ದೀಪ ಪ್ರವಜ್ವಲಿಸಿ ಕೇಕ್ ಕತ್ತರಿಸಿ ಆಸ್ಪತ್ರೆಯ ವೈದ್ಯರಾದ ಡಾ.ಎಂ.ಕೆ.ಪ್ರಸಾದ್, ಡಾ. ಬಿ.ಶ್ಯಾಮ ಮತ್ತು ಡಾ. ಸುಬ್ರಾಯ ಭಟ್ ಅವರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವೈದುರು ಕಾಮರಾಜನ್ ಅವರಿಗೂ ಕೇಕ್ ತಿನ್ನಿಸುವ ಮೂಲಕ ಸಂತೋಷದ ಕ್ಷಣ ವ್ಯಕ್ತಪಡಿಸಿದರು.
ಈ ನಡುವೆ ಡಾ.ಎಂ.ಕೆ.ಪ್ರಸಾದ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಿರಿಯರಾದ ಕಾಮರಾಜನ್ ಅವರ ಕಾಲು ಹಿಡಿದು ಆಶೀರ್ವಾದ ಪಡೆದರು. ಮಾಲಕರು ನೌಕರನ ಕಾಲು ಹಿಡಿಯಬಾರದು ಎಂದು ಕಾಮರಾಜನ್ ಅವರು ಹಿಂದೆ ಸರಿದರೂ ಡಾ.ಎಮ್.ಕೆ.ಪ್ರಸಾದ್ ಅವರು ನೀವು ನಮ್ಮಿಂದ ಹಿರಿಯರು ನಿಮ್ಮ ಕಾಲು ಹಿಡಿದು ನಮಗೆ ಆಶೀರ್ವಾದ ನೀಡಿದ ಎಂದು ಹೇಳಿ ಕಾಲು ಹಿಡಿದು ಆಶೀರ್ವಾದ ಪಡೆದರು. ಒಟ್ಟು ಕಾರ್ಯಕ್ರಮ ವೈದ್ಯರ ಮತ್ತು ಸಿಬ್ಬಂದಿಗಳ ನಡುವಿನ ಬಾಂಧವ್ಯಕ್ಕೆ ಆಸ್ಪತ್ರೆ ಮಾದರಿಯಾಯಿತು. ಆಸ್ಪತ್ರೆಯ ಸಿಬ್ಬಂದಿಗಳಾದ ನಾರಾಯಣ, ಉದಯ ಸಹಿತ ಹಲವಾರು ಮಂದಿ ಸಂಭ್ರಮಾಚರಣೆಯ ಕಾರ್ಯಕ್ರಮ ನಿರ್ವಹಿಸಿದರು.