ಅರ್ಬಿ ದೇವಸ್ಥಾನದಲ್ಲಿ‌ ಮಹಾಪೂಗ ಪೂಜೆಯ ಅಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ನ . 13 ರಂದು ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಮಹಾಪೂಗಪೂಜೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಕಾರ್ಯಕ್ರಮ ಅ. 15 ರಂದು ನಡೆಯಿತು.

ವೇದಮೂರ್ತಿ ನಾಗರಾಜ್ ಭಟ್ ಸುಳ್ಯ ಇವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ, ಮಹಾಪೂಗಪೂಜೆಯ ಮಹತ್ವ, ಹಿನ್ನೆಲೆ ಹಾಗೂ ವಿಶೇಷವನ್ನು ತಿಳಿಸಿದರು. ಮಹಾಪೂಜೆಯನ್ನು ನಡೆಸುವ ಕುರಿತು ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡಿದರು.

ದೇವಸ್ಥಾನದ ಡಿಜಿಟಲ್ ಪಾವತಿಯ QR code ನ್ನು ಮಹಾಪೂಗಪೂಜಾ ಸಮಿತಿಯ ಸಂಚಾಲಕ ಮೋಹನ ಗೌಡ ಇಡ್ಯಡ್ಕ ಬಿಡುಗಡೆಗೊಳಿಸಿ, ಪೂಗಪೂಜೆ ಸಮಾಜದಲ್ಲಿ ದೇವರ ಕುರಿತು ಭಕ್ತಿ ಸಮರ್ಪಣಾ ಭಾವವನ್ನು ಮತ್ತೊಮ್ಮೆ ಜಾಗೃತಿಗೊಳಿಸುತ್ತದೆ ಎಂದು ಹೇಳಿದರು.

ಮಹಾಪೂಗ ಪೂಜಾ ಸಮಿತಿ ಅಧ್ಯಕ್ಷೆ ಯಮುನ ಯಸ್ ರೈ ಊರಿನ ಹಾಗೂ ಪರವೂರಿನ ಸರ್ವರೂ ಮಹಾಪೂಗಪೂಜೆಯಲ್ಲಿ ಪಾಲ್ಗೊಂಡು ಯಶಸ್ವೀಗೊಳಿಸಬೇಕಾಗಿ ವಿನಂತಿಸಿದರು. ಪೂಗಪೂಜೆಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಈ ಆಸುಪಾಸಿನಲ್ಲಿ ವಿಶೇಷವಾದ ಪೂಜೆ ಆಗಿದೆ, ಆದರೆ ಶಾಸ್ತ್ರದಲ್ಲಿ ಉಲ್ಲೇಖ ಇದೆ. ಆದುದರಿಂದ ಶಿವ ದೇವರಿಗೆ ಅತ್ಯಂತ ಪ್ರೀಯವಾದ ಪೂಜೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣಕುಮಾರ ಅತ್ರಿಜಾಲು, ಪೂಗಪೂಜೆ ಸಮಿತಿ ಸಂಚಾಲಕ ಮಹಾಬಲ ಶೆಟ್ಟಿ ಬಾಲಾಜೆ , ದೇವಸ್ಥಾನದ ಅರ್ಚಕ ಕೃಷ್ಣಪ್ರಸಾದ ಉಪಾಧ್ಯಾಯ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here