ಪುತ್ತೂರು : ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಲಯ ಉದ್ಘಾಟನೆ ಮತ್ತು ಕಾರ್ಯಕರ್ತರ ಸಭೆ ಅ.17ರಂದು ಬೆಳಿಗ್ಗೆ 9.30ಕ್ಕೆ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.
ಆಮ್ ಆದ್ಮಿ ಪಾರ್ಟಿ ದ.ಕ.ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೂತನ ಕಚೇರಿ ಉದ್ಘಾಟಿಸಲಿದ್ದಾರೆ. ಎಎಪಿ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ, ರಾಜ್ಯ ಜಂಟಿ ಕಾರ್ಯದರ್ಶಿ ಮತ್ತು ಕರಾವಳಿ ವಲಯ ಸಂಯೋಜಕ ವಿವೇಕಾನಂದ ಸಾಲಿನ್ಸ್, ಎಎಪಿ ರಾಜ್ಯ ಮುಖಂಡ ಬ್ರಿಜೇಶ್ ಕಾಳಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ.ಬಿ.ಕೆ ವಿಶು ಕುಮಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ, ಸಂಘಟನಾ ಉಸ್ತುವಾರಿ ಜನಾರ್ಧನ ಬಂಗೇರ, ಅಲ್ಪಸಂಖ್ಯಾತ ಮೋರ್ಛಾ ಅಧ್ಯಕ್ಷ ಮಹಮ್ಮದ್ ಆಲಿ ತಿಳಿಸಿದ್ದಾರೆ.