ಕಡಬ: ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಪುತ್ತಿಗೆ ಪರಿಸರದಲ್ಲಿ ಮನೆ, ಕೃಷಿ ಭೂಮಿ ಭಾಗದಲ್ಲಿ ಡ್ರೋನ್ ಹಾರಾಟ ನಡೆಸಿದ್ದು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಸರ್ವೆ ಕಾರ್ಯ ಎಂದು ತಿಳಿದುಬಂದಿದೆ.
ಪುತ್ತಿಗೆ ಪರಿಸರದಲ್ಲಿ ಶುಕ್ರವಾರ ಸಂಜೆ ವೇಳೆ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಸ್ಥಳೀಯರು ಕಂಡು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಗ್ರಾ.ಪಂ. ಗೂ ಮಾಹಿತಿ ತಿಳಿದಿರಲಿಲ್ಲ. ಇದೀಗ ಈ ಡ್ರೋನ್ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಹಳೆಯ ಡ್ಯಾಂಗಳ ನೀರಿನ ಶೇಖರಣಾ ಸಾಮರ್ಥ್ಯ ಬಗ್ಗೆ ತಿಳಿಯಲು ಡ್ರೋನ್ ಸರ್ವೆ ನಡೆಸಲಾಗಿದೆ. ಎಲ್ಲೆಲ್ಲ ನದಿಗಳಿಗೆ ಡ್ಯಾಮ್ ಕಟ್ಟಲಾಗಿದೆಯಾ ಅಲ್ಲಿನ ನೀರಿನ ಶೇಖರಣಾ ಸಾಮರ್ಥ್ಯದ ಬಗ್ಗೆ ತಿಳಿಯಲು ಈ ಸರ್ವೆ ಕಾರ್ಯವನ್ನು ಡ್ರೋನ್ ಬಳಸಿ ನಡೆಸಲಾಗಿದೆ. ಇದು ಎಲ್ಲಾ ಕಡೆ ನಡೆಯುತ್ತಿದೆ. ಜನತೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.