ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ಹಗಲು ಕೋಲ, ಅಗೇಲು ಸೇವೆ

0

ಪುತ್ತೂರು:ಕಲಿಯುಗ ಕಲೆ, ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಅ.16ರಂದು ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ ಮತ್ತು ಅಗೇಲು ಸೇವೆ ನಡೆಯಿತು.  ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಅ.17ರ ರಾತ್ರಿ ಸಂಕ್ರಮಣದ ಪ್ರಯುಕ್ತ ದೈವಗಳಿಗೆ ಕೋಲ ಅಗೇಲು ಸೇವೆ ನಡೆಯಲಿದೆ.

ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಸ್ವಾಮಿ ಕೊರಗಜ್ಜ ಮತ್ತು ಅಗ್ನಿ ಕಲ್ಲುರ್ಟಿ ದೈವಗಳಿಗೆ ಕೋಲ, ಅಗೇಲು ಸೇವೆ ನಡೆಯುತ್ತದೆ.ಸಂಕ್ರಮಣದ ಹೊರತಾಗಿ ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ ಮತ್ತು ಅಗೇಲು ಸೇವೆ ನಡೆಯುತ್ತದೆ.ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಪ್ರಶ್ನಾ ಚಿಂತನೆ ಕಾರ್ಯ ನಡೆಯುತ್ತದೆ.ಪ್ರತಿ ಬುಧವಾರ ಮತ್ತು ಗುರುವಾರ ಸೂಚಿತ ಪರಿಹಾರ ಕಾರ್ಯಗಳು ನಡೆಯುತ್ತದೆ ಎಂದು ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here