ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವಾರ್ಷಿಕ ಮಹಾಸಭೆ

0

ಬ್ಯಾಂಕಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ -ಗಾಯತ್ರಿ ಆರ್

ಮಂಗಳೂರು: ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ 31ನೇ ವಾರ್ಷಿಕ ಮಹಾಸಭೆ ಅ. 16 ರಂದು ನಗರದ ಮೋತಿಮಹಲ್ ಹೋಟೆಲಿನಲ್ಲಿ ನಡೆಯಿತು. ಮಹಾಸಭೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷೆ, ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್., ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಉಪಮಹಾಪ್ರಬಂಧಕ ಗೋಪಾಲಕೃಷ್ಣ ಆರ್ ಪ್ರತಿಷ್ಠಾನದ ಬೆಳವಣಿಗೆಗೆ ಸಮಯೋಚಿತ ಸಲಹೆಗಳನ್ನು ನೀಡಿದರು.

ಕಾರ್ಯದರ್ಶಿ ಬಿ. ರಾಜೇಂದ್ರ ರೈಯವರು ಪ್ರತಿಷ್ಠಾನದ ವಾರ್ಷಿಕ ವರದಿಯನ್ನು ವಾಚಿಸಿದರು. ಲೆಕ್ಕ ಪರಿಶೋಧಕರಾದ ದಯಶರಣ್ ಶೆಟ್ಟಿ ಲೆಕ್ಕ ಪತ್ರಗಳನ್ನು ಮಂಡಿಸಿದರು. ಉಪಾಧ್ಯಕ್ಷ ಪ್ರೇಮನಾಥ್ ಆಳ್ವ ತಮ್ಮ ಅನುಭವಗಳನ್ನು ಹಂಚಿ ಮಾರ್ಗದರ್ಶನ ನೀಡಿದರು. ಪ್ರತಿಷ್ಠಾನದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕ್ ಆಫ್ ಬರೋಡದ ಕಾರ್ಯವನ್ನು ಶ್ಲಾಘಿಸಿದರು.

ಪ್ರತಿಷ್ಠಾನದ ಕೋಶಾಧಿಕಾರಿ ಸಂಜಯ್ ವಾಲಿ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಚಿನ್ ಹೆಗ್ಡೆ ವಂದಿಸಿ,‌ ಸದಾಶಿವ ಆಚಾರಿ ನಿರೂಪಿಸಿದರು.

ಉದ್ಘಾಟನಾ ಚಿತ್ರದಲ್ಲಿ ಪ್ರತಿಷ್ಠಾನದ ನಿರ್ದೇಶಕ ಕಡಮಜಲು ಸುಭಾಸ್ ರೈ, ವಿಜಯ ಬ್ಯಾಂಕ್ ನಿವೃತ್ತ ಜನರಲ್ ಮೆನೇಜರ್ ಸುಧಾಕರ ಶೆಟ್ಟಿ, ನಿವೃತ್ತ ಎಜಿಎಂ ಕೆ. ಶಿವರಾಮ ರೈ ರವರನ್ನು ಕಾಣಬಹುದು.

LEAVE A REPLY

Please enter your comment!
Please enter your name here