ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟ ಮತ್ತು ಕ್ಷೇತ್ರಿಯ ಮಟ್ಟದ ಅತ್ಲೆಟಿಕ್ ಕ್ರೀಡಾಕೂಟದಲ್ಲಿ 10 ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದ ಅನಘ ಕೆ.ಎ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯ ಗಾಂಧಿನಗರದ ಬಾಲಭಾರತಿ ಸಮೂಹ ಸಂಸ್ಥೆಯ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರು ತೆಂಕಿಲದ ಅನಘ ಕೆ.ಎ.ರವರು ಐದು ಚಿನ್ನದ ಪದಕ ಗಳಿಸಿದ್ದಾರೆ.
ವಿದ್ಯಾಭಾರತಿ ದ.ಕ.ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕದೊಂದಿಗೆ ವೈಯುಕ್ತಿಕ ಚಾಂಪಿಯನ್‌ಶಿಪ್ ಗಳಿಸಿದ್ದ ಅನಘ ಕೆ.ಎ.ರವರು ಅ.12 ಮತ್ತು 13ರಂದು ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 400 ಮೀಟರ್ ಓಟ, 100 ಮೀಟರ್ ಹರ್ಡಲ್ಸ್, 400 ಮೀಟರ್ ಹರ್ಡಲ್ಸ್, 4*100 ರಿಲೇ ಮತ್ತು 4*400 ರಿಲೇಯಲ್ಲಿ ಪ್ರಥಮ ಸ್ಥಾನಿಯಾಗಿ ಐದು ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ. ಅ.14ರಂದು ನಡೆದ ಕ್ಷೇತ್ರೀಯ ಮಟ್ಟದ ಅತ್ಲೆಟಿಕ್ಸ್ ಕ್ರೀಡಾಕೂಟದ 400 ಮೀಟರ್ ಓಟ, 100 ಮೀಟರ್ ಹರ್ಡಲ್ಸ್, 400 ಮೀಟರ್ ಹರ್ಡಲ್ಸ್, 4*100 ರಿಲೇ ಮತ್ತು 4*400 ರಿಲೇಯಲ್ಲಿ ಪ್ರಥಮ ಸ್ಥಾನಿಯಾಗಿ ಐದು ಚಿನ್ನದ ಪದಕ ಗಳಿಸಿ ಜಿಲ್ಲೆ, ರಾಜ್ಯ ಮತ್ತು ಕ್ಷೇತ್ರೀಯ ಮಟ್ಟದ ವೈಯುಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಅಲ್ಲದೆ, ಹರಿಯಾಣದ ಕುರುಕ್ಷೇತ್ರದಲ್ಲಿ ನ.19ರಿಂದ 23ರವರೆಗೆ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಮಂಗಳೂರು ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಇವರು ಮಂಗಳೂರಿನ ದಿನೇಶ್ ಕುಂದರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿರುವ ಅನಘ ಕೆ.ಎ.ರವರು ತೆಂಕಿಲ ನಿವಾಸಿಗಳಾದ ಅನಿಲ್ ಕುಮಾರ್ ಮತ್ತು ಕವಿತಾ ಅನಿಲ್ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here