





ಕಾಣಿಯೂರು: ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ದಶಮನೋತ್ಸವದ ಪ್ರಯುಕ್ತ ಅ 23 ಮತ್ತು ಅ 24ರಂದು ಪುಣ್ಚತ್ತಾರಿನಲ್ಲಿ ನಡೆಯಲಿರುವ ದಶಮ ಪರ್ವ ಮತ್ತು ದೀಪಾವಳಿ ಪ್ರಯುಕ್ತ ಪ್ರೋ ವಾಲಿಬಾಲ್ ಹಾಗೂ ಆಹ್ವಾನಿತ ತಂಡಗಳ ತ್ರೋಬಾಲ್ ಪಂದ್ಯಾಟ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಆಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಬಿಡುಗಡೆಯು ಅ 16ರಂದು ನಡೆಯಿತು.


ಈ ಸಂದರ್ಭದಲ್ಲಿ ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷರು, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಕೇಂದ್ರ ಸರಕಾರದ ನಿವೃತ್ತ ಉಪ ಕಾರ್ಯದರ್ಶಿ ಎಂ.ಎನ್ ಗೌಡ ಕಾಣಿಯೂರು, ಕ್ಲಬ್‌ನ ಅಧ್ಯಕ್ಷ ಹರೀಶ್ ಪೈಕ ಕಟೀಲ್, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಪೈಕ, ಕೋಶಾಧಿಕಾರಿ ಮಾಧವ ಕಲ್ಪಡ, ಉಪ ಕಾರ್ಯದರ್ಶಿ ಮಿಥುನ್ ಪೈಕ, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಪೈಕ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.














