ಕಿರು ಹಸಿ ತ್ಯಾಜ್ಯ ಸ್ವಚ್ಛ ಮರುಬಳಕೆ ಸಂಕೀರ್ಣ ಘಟಕ ನಿರ್ಮಾಣ

0

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಮಾದರಿ ಕಾರ್ಯ

  • ಇತರ ದೇವಸ್ಥಾನಗಳಿಗೂ ಮಾದರಿಯಾಗಲಿ ಎಸಿ ಗಿರೀಶ್‌ನಂದನ್
  • ಕಿರು ತ್ಯಾಜ್ಯ ಘಟಕಗಳಾದರೆ ನಗರಸಭೆಗೆ ಹೊರೆ ಕಡಿಮೆ ಜೀವಂಧರ್ ಜೈನ್
  • ದೇವಸ್ಥಾನದ ವತಿಯಿಂದ ಆದರ್ಶ, ಮಾದರಿ ಕಾರ್ಯ ಪಿ.ಜಿ.ಜಗನ್ನಿವಾಸ ರಾವ್
  • ದಾನಿಗಳ ಮೂಲಕ ಘಟಕ ನಿರ್ಮಾಣ ಆಗಿದೆ -ಕೇಶವಪ್ರಸಾದ್ ಮುಳಿಯ
  • ಮಕ್ಕಳಿಗೆ ಅನ್ನಪ್ರಸಾದ ಧರ್ಮದ ಬಗ್ಗೆ ಜಾಗೃತಿ ಮೂಡಲಿದೆಹರೀಶ್ ಪುತ್ತೂರಾಯ

ಪುತ್ತೂರು:ಮಾನವನು ಬಳಸಿದ ವಸ್ತುಗಳ ಉಳಿದ ಭಾಗ ತ್ಯಾಜ್ಯದ ಉಗಮಕ್ಕೆ ಕಾರಣವಾಗಲಿದ್ದು ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ, ಪರಿಸರ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.ಇದರ ಜೊತೆಯಲ್ಲಿ ಕಸದೊಳಗಿನ ರಸ ತೆಗೆಯಲು ಕೂಡಾ ಇವು ಸಂಪನ್ಮೂಲಗಳಾಗಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ.ಅನೇಕ ಪದ್ಧತಿಗಳು ಮತ್ತು ವಿವಿಧ ಕ್ಷೇತ್ರಗಳ ಪರಿಣಿತರ ನೆರವಿನೊಂದಿಗೆ ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ತಾಲೂಕು, ಗ್ರಾಮಗಳಲ್ಲಿ ಘಟಕಗಳು ಅನುಷ್ಠಾನವಾಗುತ್ತಿವೆ.ಎಲ್ಲಾ ವಿಚಾರದಲ್ಲೂ ತಾಲೂಕು ಆಡಳಿತವನ್ನು ಅವಲಂಬಿಸದೆ ಹಸಿ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಗೊಬ್ಬರ ಮಾಡಿ ಕೃಷಿಗೆ ಬಳಸುವ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಾಜ್ಯದ ದೇವಸ್ಥಾನಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ.
ರಾಜ್ಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಿಟ್ಟರೆ ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿ ತ್ಯಾಜ್ಯ ಮರುಬಳಕೆಯ ಸಂಕೀರ್ಣ ಘಟಕ ನಿರ್ಮಾಣ ಆಗಿದ್ದು ಅ.17ರಂದು ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ದೇವಸ್ಥಾನದಲ್ಲಿ ಉಪಯೋಗಿಸಲ್ಪಟ್ಟ ಹೂವು,ಫಲವಸ್ತುಗಳನ್ನು ಘಟಕಕ್ಕೆ ಸುರಿಯುವ ಮೂಲಕ ಘಟಕಕ್ಕೆ ಚಾಲನೆ ನೀಡಿದರು.

ಇತರ ದೇವಸ್ಥಾನಗಳಿಗೂ ಮಾದರಿಯಾಗಲಿ: ಬಳಿಕ ಮಾತನಾಡಿದ ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರು,ದೇವಸ್ಥಾನಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಿದಾಗ ಅದರ ಪ್ರತಿಫಲ ಸಿಗುತ್ತದೆ.ಪ್ರತಿ ಬಾರಿ ನಗರಸಭೆಗೆ ಹೊರೆಯಾಗದಂತೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರು ತ್ಯಾಜ್ಯ ಘಟಕ ನಿರ್ಮಾಣ ಮಾಡಿರುವುದು ಇತರ ದೇವಸ್ಥಾನಗಳಿಗೆ ಮಾದರಿಯಾಗಲಿ ಎಂದರು.ನಗರಸಭೆಯು ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿರುವಾಗ ಅದಕ್ಕೆ ಪೂರಕವಾಗಿ ಈ ರೀತಿಯ ಕಾರ್ಯಕ್ರಮಗಳು ನಡೆಯಬೇಕೆಂದವರು ಹೇಳಿದರು.

ಕಿರು ತ್ಯಾಜ್ಯ ಘಟಕಗಳಾದರೆ ನಗರಸಭೆಗೆ ಹೊರೆ ಕಡಿಮೆ: ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ನಗರಸಭೆಯೊಂದಿಗೆ ಕೈಜೋಡಿಸಿ ಉತ್ತಮ ಯೋಜನೆ ಹಾಕಿಕೊಂಡ ದೇವಸ್ಥಾನದ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ನಗರಸಭೆಗೆ ದಿನ ನಿತ್ಯ 6ರಿಂದ 8 ಟನ್‌ಗಳಷ್ಟು ಹಸಿ ತ್ಯಾಜ್ಯ ಶೇಖರಣೆ ಆಗುತ್ತದೆ.ಕಸ ವಿಲೇವಾರಿ ಕಷ್ಟಕರವಾದ ವಿಚಾರ.ಪೌರ ಕಾರ್ಮಿಕರ ಮೂಲಕ ಪುತ್ತೂರು ನಗರದ ಸ್ವಚ್ಛತೆಯಿಂದ ಯಾವುದೇ ರೋಗಗಳು ಬರುತ್ತಿಲ್ಲ.ಇಂತಹ ಕಿರು ತ್ಯಾಜ್ಯ ಘಟಕಗಳು ಹೊಟೇಲ್‌ಗಳು, -ಟ್‌ಗಳಲ್ಲಿ ಆದರೆ ನಗರಸಭೆಯ ಹೊರೆ ಬಹಳಷ್ಟು ಕಡಿಮೆ ಆಗುತ್ತದೆ.ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಕಳೆದ ಒಂದು ವರ್ಷದಿಂದ ರೋಟರಿ ಈಸ್ಟ್ ಮೂಲಕ ಬಯೋಗ್ಯಾಸ್ ಘಟಕದ ಕಾಮಗಾರಿ ನಡೆಯುತ್ತಿದೆ.ಕೆಲವೇ ತಿಂಗಳಲ್ಲಿ ಬಯೋಗ್ಯಾಸ್ ನಿರ್ಮಾಣ ಘಟಕ ಆಗಲಿದೆ ಎಂದು ಅವರು ಹೇಳಿದರು.

ದೇವಸ್ಥಾನದ ವತಿಯಿಂದ ಆದರ್ಶ, ಮಾದರಿ ಕಾರ್ಯ: ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಸ್ವಚ್ಛ ಪುತ್ತೂರು-ಸುಂದರ ಪುತ್ತೂರಿನ ಪ್ರಣಾಳಿಕೆಯನ್ನು ಅಕ್ಷರಶಃ ನಮ್ಮ ಅಧ್ಯಕ್ಷರು ನೆರವೇರಿಸುತ್ತಿದ್ದಾರೆ.ಮನೆ ಮನೆ ಕಾಂಪೋಸ್ಟ್ ಗೊಬ್ಬರ ನಿರ್ಮಾಣದ ಜೊತೆಗೆ ಇವತ್ತು ದೇವಸ್ಥಾನವೂ ಮುಂದೆ ಬಂದು ಹಸಿ ತ್ಯಾಜ್ಯವನ್ನು ಗೊಬ್ಬರ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.ದೇವಸ್ಥಾನದ ವತಿಯಿಂದ ಆದರ್ಶ, ಮಾದರಿ ಕಾರ್ಯ ಇವತ್ತು ಆಗಿದೆ ಎಂದರು.

ದಾನಿಗಳ ಮೂಲಕ ಘಟಕ ನಿರ್ಮಾಣ ಆಗಿದೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಸ್ಥಾನದಲ್ಲಿ ಉಂಟಾಗುವ ತ್ಯಾಜ್ಯದ ಬಗ್ಗೆ ಯಾರು ಕೂಡಾ ಎಲ್ಲಿಯೂ ಗಮನ ಹರಿಸುವುದಿಲ್ಲ.ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಜೊತೆಗೆ ದೇವಳದ ಕೃಷಿಗೆ ಗೊಬ್ಬರನ್ನಾಗಿ ಪರಿವರ್ತಿಸುವ ಕೆಲಸ ಆಗಿದೆ.ಈಗಾಗಲೇ ಎಳನೀರಿನ ತ್ಯಾಜ್ಯಗಳನ್ನೂ ಗೊಬ್ಬರವನ್ನಾಗಿ ಮಾಡುವ ಯುನಿಟ್ ಮಾಡಲಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಅನ್ನಪ್ರಸಾದ ಧರ್ಮದ ಬಗ್ಗೆ ಜಾಗೃತಿ ಮೂಡಲಿದೆ: ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್(ಪೇಸ್)ನ ಮಾಜಿ ಅಧ್ಯಕ್ಷ ಹರೀಶ್ ಪುತ್ತೂರಾಯ ಅವರು ಮಾತನಾಡಿ ಮಕ್ಕಳಿಗೆ ಊಟ ಕೊಡುವ ವ್ಯವಸ್ಥೆಯಲ್ಲಿ ದುರುಪಯೋಗ ಆಗಬಾರದು ಎಂಬ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯಾ ದಾಸೋಹ ಕಾರ್ಯಕ್ರಮ ಧರ್ಮದ ಬಗ್ಗೆ ಜಾಗೃತಿ ಮತ್ತು ಮಕ್ಕಳಲ್ಲಿ ಭಕ್ತಿ ಹೆಚ್ಚಿಸಲಿದೆ ಎಂದರಲ್ಲದೆ,ದೇವಳದಲ್ಲಿ ಕಿರು ಹಸಿ ತ್ಯಾಜ್ಯ ಮರುಬಳಕೆ ಸಂಕೀರ್ಣ ಘಟಕ ಉದ್ಘಾಟನೆಗೊಂಡಿರುವುದು ಬಹಳಷ್ಟು ಉತ್ತಮ ವಿಚಾರವಾಗಿದ್ದು ಇದು ಎಲ್ಲರಿಗೂ ಮಾದರಿಯಾಗಲಿ ಎಂದರು.ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಅನ್ನ ನೀಡುವ ಅನ್ನ ದಾಸೋಹ ಯೋಜನೆಗೆ ತನ್ನ ಪುತ್ತೂರಾಯ ಎಂಟರ್‌ಪ್ರೈಸಸ್ ವತಿಯಿಂದ ರೂ.5 ಸಾವಿರ ನೀಡುವ ಮೂಲಕ ದೇಣಿಗೆಗೆ ಚಾಲನೆ ನೀಡಿದರು.ಶಂಕರನಾರಾಯಣ ಭಟ್ ಪ್ರಾರ್ಥಿಸಿದರು.ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ವಂದಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ್ ರೈ ಬಳ್ಳಮಜಲು, ಉದ್ಯಮಿ ಶಿವಪ್ರಸಾದ್ ರೈ,ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹರಿಪ್ರಸಾದ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾದಾಸೋಹಕ್ಕೆ ಪ್ರೋತ್ಸಾಹ ನೀಡಲು ಮನವಿ

ದೇವಳದ ಹೊಸ ಯೋಜನೆ ವಿದ್ಯಾದಾಸೋಹದ ಕುರಿತು ಈಗಾಗಲೇ ಸ್ಟೇಟಸ್ ಹಾಕಿದ್ದನ್ನು ನೋಡಿ ಬಿ.ಸಿ.ರೋಡ್‌ನ ವ್ಯಕ್ತಿಯೊಬ್ಬರು ಪ್ರೋತ್ಸಾಹ ನೀಡಿದ್ದಾರೆ.ಅದೇ ರೀತಿ ಉದ್ಯಮಿ ಶಿವಪ್ರಸಾದ್ ರೈ,ಜಯಲಕ್ಷ್ಮೀ ಸೇರಿದಂತೆ ಹಲವಾರು ಮಂದಿಯಿಂದ ಉತ್ತಮ ಸ್ಪಂದನೆ ದೊರೆತಿದೆ.ದೇವಸ್ಥಾನದಲ್ಲಿ ಅನೇಕ ಮಕ್ಕಳು ಬಂದು ಊಟ ಮಾಡಿ ಹೋಗುತ್ತಾರೆ.ಆದರೆ ಇದು ಅವರ ಮನೆಯವರಿಗೆ ಗೊತ್ತಿರಬೇಕೆಂಬುದು ನಮ್ಮ ಉದ್ದೇಶ.ಮಕ್ಕಳು ಊಟಕ್ಕೆಂದು ಮನೆಯಿಂದ ಹಣ ಪಡೆದುಕೊಂಡು ಬಂದು ದೇವಸ್ಥಾನದಲ್ಲಿ ಊಟ ಮಾಡಿ,ಮನೆಯಿಂದ ತಂದ ಹಣದಲ್ಲಿ ಅವರಿಗೆ ಬೇಡದ ಹವ್ಯಾಸ ಆಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಗುರುತಿನ ಚೀಟಿ ನೀಡಲು ಉದ್ದೇಶಿಸಲಾಗಿದೆ.

ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

90 ದಿವಸದಲ್ಲಿ ಗೊಬ್ಬರ ಸಿದ್ಧ

ಗ್ರಾ.ಪಂ.ಗಳಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಿರುವುದರಿಂದ ಇಲ್ಲಿ ವೈಜ್ಞಾನಿಕವಾಗಿ ಘಟಕ ನಿರ್ಮಾಣ ಮಾಡಿದ್ದೇವೆ.ಈಗಾಗಲೇ ಸದಸ್ಯರಿಗೆ ಸುಬ್ರಹ್ಮಣ್ಯದಲ್ಲಿ ತರಬೇತಿಯು ನಡೆದಿದೆ. ಸುಮಾರು 2 ತಿಂಗಳ ಹಿಂದೆಯೇ ಇಲ್ಲಿ ಘಟಕ ನಿರ್ಮಾಣ ಮಾಡಲಾಗಿತ್ತು. ಈ ಘಟಕದಲ್ಲಿ ಸ್ಲರಿ ವಾಸನೆ ಬರುವುದಿಲ್ಲ.ಇಂತಹ ಘಟಕ ಕಟೀಲ್ ಹೊರತು ಬೇರೆ ಯಾವ ದೇವಸ್ಥಾನದಲ್ಲೂ ಇಲ್ಲ.ಈಗಾಗಲೇ 2 ತಿಂಗಳಲ್ಲಿ 5 ಸಾವಿರ ಕೆ.ಜಿ.ಯಷ್ಟು ತ್ಯಾಜ್ಯ ಹಾಕಿದ್ದೇವೆ. ಅದು ಒಂದು ಫೀಟ್ ಕೂಡಾ ಮೇಲೆ ಬರಲಿಲ್ಲ.ಘಟಕದಲ್ಲಿ ನಾಲ್ಕು ಬಾಕ್ಸ್ ಮಾಡಲಾಗಿದ್ದು, ಒಂದು ಬಾಕ್ಸ್‌ನಲ್ಲಿ 10 ಸಾವಿರ ಕೆಜಿ ತ್ಯಾಜ್ಯ ಸಂಗ್ರಹವಾಗುತ್ತದೆ.ದೇವಳದಲ್ಲಿ ಸಾವಿರಾರು ಮಂದಿಗೆ ಅನ್ನಪ್ರಸಾದ ನೀಡಲಾಗುತ್ತದೆ.ಅದರ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುವುದು.ಈಗಾಗಲೇ ಗೊಬ್ಬರದಲ್ಲಿ ಬ್ಲ್ಯಾಕ್ ಸೋಲ್ಡ್ಜರ್ ಕ್ರಿಯೇಟ್ ಆಗಿದೆ.ಇಂತಹ ಘಟಕ ಪ್ರತಿ ಹೋಟೇಲ್‌ನಲ್ಲಿ ನಿರ್ಮಾಣ ಮಾಡಿದರೆ ಉತ್ತಮ.

ನವೀನ್ ಭಂಡಾರಿ ಎಸ್, ಕಾರ್ಯನಿರ್ವಹಣಾಽಕಾರಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here