ಡಬ್ಲ್ಯೂ ಎಫ್ಎಫ್ ಇಂಡಿಯಾ ಚಾಂಪಿಯನ್‌ಶಿಪ್‌ನಲ್ಲಿ ನಿಶಾಂತ್‌ಗೆ ಚಿನ್ನದ ಪದಕ

0

ಪುತ್ತೂರು : ಬೆಂಗಳೂರಿನ ಬೇಗೂರು ರಸ್ತೆಯಲ್ಲಿರುವ ಆರ್‌ಎನ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಅ.15ರಂದು ನಡೆದ ಡಬ್ಲ್ಯೂ ಎಫ್ಎಫ್ ಇಂಡಿಯಾ ಚಾಂಪಿಯನ್‌ಶಿಪ್‌ನಲ್ಲಿ 19 ವರ್ಷದೊಳಗಿನ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಾಲ್ಮರ ಮಹಾಸತಿ ನಗರದ ನಿಶಾಂತ್ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆ. ಇವರು ದಕ್ಷಿಣ ಕನ್ನಡ 2019ರ ಚಾಂಪಿಯನ್ ಆಫ್ ಚಾಂಪಿಯನ್ ಮತ್ತು ಏಷ್ಯಾ ಪೆಸಿಫಿಕ್ 2019ರ ಬೆಳ್ಳಿ ಪದಕ ವಿಜೇತ ಸಚಿನ್ ರೈ ಪುತ್ತೂರು ರವರಿಂದ ತರಬೇತಿ ಪಡೆದಿರುವ ಇವರು ಮೇನಕಾ ಮತ್ತು ರವೀಂದ್ರ ಸಿ.ಎಚ್ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here