ಬೆಳಿಯೂರುಕಟ್ಟೆ ರಾಯಲ್ ಕಾಂಪ್ಲೆಕ್ಸ್ ನಲ್ಲಿ ಅರ್ವಿ ಪುಟ್ ವೇರ್ ಶುಭಾರಂಭ

0

ಬಲ್ನಾಡು : ಬೆಳಿಯೂರುಕಟ್ಟೆ ಕೆನರಾ ಬ್ಯಾಂಕ್ ಬಳಿ ಇರುವ ರಾಯಲ್ ಕಾಂಪ್ಲೆಕ್ಸ್ ನಲ್ಲಿ ಅರ್ವಿ ಪುಟ್ ವೇರ್ ಅಕ್ಟೋಬರ್ 17ರಂದು ಶುಭಾರಂಭಗೊಂಡಿದೆ.

ಮಾಲಕರ ತಾಯಿ ದೇವಕಿ ಉದ್ಘಾಟನೆ ಮಾಡಿದರು. ಸಂಸ್ಥೆಯ ಮಾಲಕರದ ವಿನೋದ್ ಮಾತನಾಡಿ ನಮ್ಮಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗಿನ ವಿವಿಧ ವಿನ್ಯಾಸದ ಹಾಗೂ ವಿವಿಧ ಬ್ರಾಂಡೆಡ್ ಕಂಪನಿಗಳ ಪಾದರಕ್ಷೆಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಮಾಲಕರ ಅಕ್ಕ ಭಾವ, ರಾಯಲ್ ಕಾಂಪ್ಲೆಕ್ಸ್ ನ ಮಾಲಕರಾದ ಶರೀಪ್, ಉಮೇಶ್, ಮಹಮ್ಮದ್ ನಾಸಿರ್, ಮನೋಜ್, ಹರ್ಷ,ಹರ್ಷಿತ್ ರಂಜಿತ್, ರಾಜೇಶ್ ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here