ಫಿಲೋಮಿನಾ ಕಾಲೇಜಿನಲ್ಲಿ ಒಪ್ಟುಮ್ ಕಂಪೆನಿಯ ಕ್ಯಾಂಪಸ್ ಸಂದರ್ಶನ

0

ಪುತ್ತೂರು: ಮಾಯಿದೆ ದೇವುಸ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ತರಬೇತಿ ಮತ್ತು ಉದ್ಯೋಗ ನೇಮಕಾತಿ ಘಟಕ, ಐಕ್ಯೂಎಸಿ ಮತ್ತು ವೈದ್ಯಕೀಯನಿರ್ವಹಣಾ ತಂತ್ರಜ್ಞಾನವನ್ನು ಒದಗಿಸುವ ಅಂತರಾಷ್ಟ್ರೀಯ ಓಪ್ಟುಮ್ ಕಂಪೆನಿಯ ಆಶ್ರಯದಲ್ಲಿ ಕ್ಯಾಂಪಸ್ ಉದ್ಯೋಗ ನೇಮಕಾತಿ ಮೇಳವನ್ನು ಇತ್ತೀಚೆಗೆ ಆಯೋಜಿಸಲಾಯಿತು.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ, ಒಪ್ಟುಮ್ ಕಂಪೆನಿಯ ದೇಶೀಯ ವ್ಯವಹಾರಗಳ ನಿರ್ದೇಶಕ ಮತ್ತು ಉಪಾಧ್ಯಕ್ಷ ಓರ್ವಿಲ್ಲೆ ಜೇಮ್‌ಸನ್ ಡಿ’ಸೋಜ ಮಾತನಾಡಿ ಕಂಪೆನಿಯು ಭಾರತದಲ್ಲಿವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆಯುತ್ತಿದ್ದು ಸಾಪ್ಟ್‌ವೇರ್ ತಂತ್ರಾವಿದರಿಗೆ ಹೇರಳ ಅವಕಾಶವಿದೆ. ನಗರದ ವಿದ್ಯಾರ್ಥಿಗಳಿಗಷ್ಟೆ ಕಂಪೆನಿ ಆಸ್ಪದ ನೀಡುತ್ತಿಲ್ಲ, ಚಿಕ್ಕಪಟ್ಟಣದ, ಹಳ್ಳಿಯ ವಿದ್ಯಾರ್ಥಿಗಳಿಗೂ ಉದ್ಯೋಗ ಅವಕಾಶ ನೀಡುವ ಗುರಿಯನ್ನು ಹೊಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೇರಳ ಅವಕಾಶವಿದೆ. ದತ್ತಾಂಶಗಳನ್ನು ಸಂಗ್ರಹಿಸುವ ಮತ್ತು ಪರಿಶೀಲನೆ ಮಾಡಲು ಕೋಡಿಂಗ್ ತಂತ್ರಜ್ಞಾನ ತಿಳಿದವರ ಅವಶ್ಯಕತೆ ಇದೆ. ತಮ್ಮ ಕಂಪೆನಿ ಎಳೆಯರನ್ನು ನೇಮಿಸಿಕೊಂಡು, ಸೂಕ್ತ ತರಬೇತಿ ನೀಡಿ ಅತ್ಯುತ್ತಮ ಉದ್ಯೋಗ ನೀಡುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾಲಘಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿರಬೇಕು. ಬರೆಯುವ, ವಿಚಾರವನ್ನು ಅಭಿವ್ಯಕ್ತಿಸುವ ಜಾಣ್ಮೆಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕು. ಹುಟ್ಟಿನಿಂದ ಯಾರಿಗೂ ಈ ಕೌಶಲ್ಯಗಳು ಬರಲಾರವು. ಅವುಗಳನ್ನು ಸ್ವಾಂಗೀಕರಿಸಿಕೊಳ್ಳಲು ವಿದ್ಯಾರ್ಥಿದಿಸೆಯಲ್ಲಿ ಪ್ರಯತ್ನಿಸಬೇಕು ಮತ್ತು ಅಂಥವರು ಯಶಸ್ವಿಗಳಾಗುತ್ತರೆ ಎಂದು ನುಡಿದರು.

ತರಬೇತಿ ಮತ್ತು ಉದ್ಯೋಗ ನೇಮಕಾತಿ ಘಟಕದ ನಿರ್ದೇಶಕ ಡಾ.ರಾಧಾಕೃಷ್ಣ ಗೌಡ ಸ್ವಾಗತಿ, ಸಿಮ  ಕಾರ್ಯಕ್ರಮದ ಕುರಿತು ಪ್ರಸ್ತಾವಿಸಿದರು. ತೃತೀಯ ಬಿಎ ವಿದ್ಯಾರ್ಥಿ ಭಾಗ್ಯಶ್ರೀ ರೈ ಪ್ರಾರ್ಥಿಸಿ, ಲೆ.ಡೇವಿಡ್ ಜಾನ್ಸನ್ ಸಿಕ್ವೇರಾ ವಂದಿಸಿದರು. ಸಮಾಜಕಾರ್ಯ ಪ್ರಾಧ್ಯಾಪಿಕೆ ನ್ಯಾನ್ಸಿ ಲವಿನಾ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.
ಒಪ್ಟುಮ್ ಕಂಪೆನಿಯ ಕ್ಲೆಮೆಂಟ್ ಜೋಯಲ್ ಸಿಕ್ವೇರಾ, ಭಾಸ್ಕರ್ ಮಂಡ್ಲೆಮ್, ಮಿಶೆಲ್ ಪಿಂಟೋ ಸಂದರ್ಶನದ ಬೇರೆ ಬೇರೆ ಹಂತಗಳ ಕುರಿತು ವಿವರಣೆ ನೀಡಿದರು. 120 ವಿದ್ಯಾರ್ಥಿಗಳು ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

LEAVE A REPLY

Please enter your comment!
Please enter your name here