ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ನ್ಯಾಷನಲ್ ಯೋಗ ಸ್ಪರ್ಧೆಯಲ್ಲಿ ಪ್ರಣಮ್ಯ ಅಗಳಿಗೆ ಬೆಳ್ಳಿ ಪದಕ

0

ಕಾಣಿಯೂರು: ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಸೆ 29ರಿಂದ ಅ 15ರ ವರೆಗೆ ಗುಜರಾತ್ ನಲ್ಲಿ ನಡೆದ ನ್ಯಾಷನಲ್ ಯೋಗ ಗೇಮ್ಸ್ ರಿದಮಿಕ್ ಯೋಗ ಸ್ಪರ್ಧೆ ಯಲ್ಲಿ ಪ್ರಣಮ್ಯ ಅಗಳಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಯೋಗದಲ್ಲಿ ಹಲವಾರು ಸಾಧನೆಗೈದ ಯೋಗ ಸಾಧಕಿ ಪ್ರಣಮ್ಯ ಅಗಳಿ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್, ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್, ಯೋಗ ಒಲಂಪಿಯಾಡ್ ಚಾಂಪಿಯನ್ ಶಿಪ್, ಎನ್. ವೈ.ಎಸ್.ಎಫ್ ಯೋಗ ಸ್ಪೋರ್ಟ್ಸ್ ಫೆಡರೇಷನ್, ಇಂಟರ್ನ್ಯಾಷನಲ್ ಫೈವ್ ಸ್ಟಾರ್ ಅವಾರ್ಡ್, GIZA ವರ್ಲ್ಡ್ ವೈಡ್ ರೆಕಾರ್ಡ್, ಕ್ರೀಡಾ ಭಾರತಿ ಜೀಜಾಬಾಯಿ ಪ್ರಶಸ್ತಿ, ಇಂಟರ್ನ್ಯಾಷನಲ್ ಎಕ್ಸ್ ಲೆನ್ಸ್ ಪ್ಲೇಯರ್ ಅವಾರ್ಡ್, ಯೂನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರಣಮ್ಯ ಮೈಸೂರು ರಾಜ್ಯ ಯೋಗ ದಸರಾ ಪ್ರಶಸ್ತಿ ಪಡೆದು ತನ್ನದಾಗಿಸಿಕೊಂಡಿದ್ದರು. ಇವರು ಅಗಳಿ ಚಂದ್ರಹಾಸ ಗೌಡ ಮತ್ತು ಅಂತಾರಾಷ್ಟ್ರೀಯ ಯೋಗ ಪಟು ಹೇಮಚಂದ್ರಹಾಸರವರ ಪುತ್ರಿ.

LEAVE A REPLY

Please enter your comment!
Please enter your name here