ನೆಲ್ಯಾಡಿ: ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರ ಸಂಘವಾಗಿರುವ ಕಾಮಧೇನು ಮಹಿಳಾ ಸಹಕಾರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೃಹಣಿಯರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದ್ದು ಇದರ ಮಾಹಿತಿ ಕರಪತ್ರ ಅ.20ರಂದು ನೆಲ್ಯಾಡಿಯಲ್ಲಿರುವ ಸಂಘದ ಮುಖ್ಯ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ದೀಪಾವಳಿ ಹಬ್ಬದ ಪ್ರಯುಕ್ತ ಗೃಹಿಣಿಯರಿಗಾಗಿ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಆಕರ್ಷಕ ಬಡ್ಡಿದರದಲ್ಲಿ ತ್ವರಿತ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಅ.20ರಿಂದ ಅ.31ರ ತನಕ ಈ ಯೋಜನೆ ಜಾರಿಯಲ್ಲಿದ್ದು ಮಹಿಳೆಯರು ಇದರ ಸದವಕಾಶ ಪಡೆದುಕೊಳ್ಳುವಂತೆ ಹೇಳಿದರು. ಸಂಘದ ಉಪಾಧ್ಯಕ್ಷೆ ಮೇಘನಾ, ನಿರ್ದೇಶಕರಾದ ಸಂಪಾವತಿ, ವಾರಿಜಾಕ್ಷಿ, ರತಿ, ಶಾಲಿನಿ, ಡೈಸಿ, ಸಂಘದ ವ್ಯವಸ್ಥಾಪಕಿ ಚೈತನ್ಯ, ಸಿಬ್ಬಂದಿ ಸ್ವಾತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.