ಅರಿಯಡ್ಕ ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

0

ಅರಿಯಡ್ಕ:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಿಯಡ್ಕ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಅ. 16 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹರೀಶ್ ರೈ ಜಾರತ್ತಾರು, ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್ ಮಡ್ಯಂಗಳ ಮತ್ತು ಬಶೀರ್ ಕೌಡಿಚ್ಚಾರು, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಎ.ಆರ್ ಶೇಖಮಲೆ, ಕಾರ್ಯದರ್ಶಿಗಳಾಗಿ ಗಣೇಶ್ ಶೇಖಮಲೆ ಮತ್ತು ಸುಂದರ ನಾಯ್ಕ ಕುತ್ಯಾಡಿ , ಕೋಶಾಧಿಕಾರಿಯಾಗಿ ಸುಕುಮಾರ ಮಡ್ಯಂಗಳ, ಗೌರವ ಸಲಹೆಗಾರರಾಗಿ ಎ.ಕೆ ರೈ ಅರಿಯಡ್ಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಎಸ್.ಎಂ ಮಾಡಾವು, ನಿವೃತ್ತ ಸೈನಿಕ ಚಂದ್ರಶೇಖರ ಪಟ್ಲಕಾನ, ಪುತ್ತೂರು ಅಗ್ನಿ ಶಾಮಕ ದಳದ ಈಶ್ವರ ಪಲ್ಲದಗುರಿ, ಗುರವಪ್ಪ ನಾಯ್ಕ ಶೇಖಮಲೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಜಯಂತಿ ಎನ್  ಹಾಗೂ 33 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here