ಪುತ್ತೂರು: ಸಾರಿಗೆ ಇಲಾಖೆ ಏಕಾಏಕಿ ಸಾರಿಗೆ, ಗೂಡ್ಸ್ ವಾಹನ ಮಾಲಿಕರಿಗೆ ಅರ್ಹತಾ ಪತ್ರ ಪಡೆಯಲು ಕಡ್ಡಾಯಗೊಳಿಸಿರುವ ದುಬಾರಿ ವೆಚ್ಚದ ರೆಟ್ರೋ ರಿಪ್ಲೆಕ್ಟರ್ ವ್ಯವಸ್ಥೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಎನ್.ರವರು ಪುತ್ತೂರು ಸಾರಿಗೆ ಇಲಾಖಾ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ವಾಹನ ನೋಂದಣಿ ನವೀಕರಣ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಿದ್ದು ಇದರಿಂದ ವಾಹನ ಮಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆ ಏರಿಕೆ ಹಾಗೂ ಸರಿಯಾದ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ದುಬಾರಿ ಹಣ ಪಡೆದು ರೆಟ್ರೋ ರಿಪ್ಲೆಕ್ಟರ್ ಮತ್ತು ಸ್ಪೀಕರ್ ಕಡ್ಡಾಯಗೊಳಿಸಿರುವುದು ಹೊರೆಯಾಗಿದೆ. ಆದುದರಿಂದ ಇದನ್ನು ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ. ಪ್ರಮುಖರಾದ ಹನೀಫ್ ಪುಂಚತ್ತಾರ್, ಕಮಲೇಶ್ ಸರ್ವೆದೋಳಗುತ್ತು,ಫಾರೂಕ್ ಬಾಯಬೆ, ಅನ್ವರ್ ಕಾಸಿಂ, ಗಂಗಾಧರ್ ಶೆಟ್ಟಿ, ಶಹನಾಜ್ ಬಪ್ಪಳಿಗೆ, ಸಂಸುಂದ್ದಿನ್ ಅಜ್ಜಿನಡ್ಕ, ದಾಮೋದರ ಮುರ ಮತ್ತು ಇಸ್ಮಾಯಿಲ್ ಬಲ್ನಾಡು ಉಪಸ್ಥಿತರಿದ್ದರು.