ಪುತ್ತೂರು:ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ)ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಪಿ.ಇಬ್ರಾಹಿಂ ಗೋಳಿಕಟ್ಟೆಯವರನ್ನು ನೇಮಕಗೊಳಿಸಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂರವರು ಆದೇಶಿಸಿದ್ದಾರೆ.
ಗೋಳಿಕಟ್ಟೆ ವೈಟ್‌ಹೌಸ್ ನಿವಾಸಿಯಾಗಿರುವ ಇಬ್ರಾಹಿಂ ಗೋಳಿಕಟ್ಟೆಯವರು ಕಳೆದ 26 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುತ್ತಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ತಾಲೂಕು ಅಧ್ಯಕ್ಷರಾಗಿ, 2004ರಲ್ಲಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ, 2005ರಲ್ಲಿ ಮೈಸೂರು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ, 2006 ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ, 2000ದಲ್ಲಿ ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿ, 2007ರಲ್ಲಿ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ದ.ಕ ಜಿಲ್ಲಾ ಉಸ್ತುವಾರಿಯಾಗಿ, ದ.ಕ ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾಗಿ, 2007ರಲ್ಲಿ ಮೈಸೂರುನಗರ ಸ್ಥಳೀಯ ಸಂಸ್ಥೆಯ ಚುನಾವಣಾ ವೀಕ್ಷಕರಾಗಿ, 2013ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯಾಧ್ಯಕ್ಷರಾಗಿ, 2014ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ, 2016ರಿಂದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು 2021ರಲ್ಲಿ ಕಲುಬುರ್ಗಿಯ ನಗರ ಪಾಲಿಕೆ ಚುನಾವಣೆಯ ಪ್ರಚಾರ ಸಮಿತಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಪಕ್ಷದ ಕಾರ್ಯಚಟುವಟಿಕೆ, ಹೋರಾಟ, ಕಾರ್ಯವೈಖರಿಯನ್ನು ಕಂಡು ಪಕ್ಷದ ವರೀಷ್ಠ ದೇವೇ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಶಿಪಾರಸ್ಸಿನಂತೆ ನೇಮಕಗೊಳಿಸಿದ್ದಾರೆ ಎಂದು ಇಬ್ರಾಹಿಂ ಗೋಳಿಕಟ್ಟೆಯವರು ತಿಳಿಸಿದ್ದಾರೆ.