ಉದಯೋನ್ಮುಖ ಪ್ರತಿಭೆ ಶ್ರೀಮಾ ಬೊಟ್ಯಾಡಿ ಅವರ ‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್ ಬಿಡುಗಡೆ

0

ಪುತ್ತೂರು: ನಮ್ಮೂರಿನ ಅದೆಷ್ಟೋ ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದರೂ ಕೆಲವೊಮ್ಮೆ ಅದು ಯಾರಿಗೂ ಗೊತ್ತಾಗೋದೇ ಇಲ್ಲ. ಸಿನಿಮಾ ಕ್ಷೇತ್ರಕ್ಕೆ ಅನೇಕ ದಿಗ್ಗಜರನ್ನು ಕೊಟ್ಟ ಹೆಮ್ಮೆ ನಮ್ಮ ದ.ಕ ಜಿಲ್ಲೆಗಿದೆ. ಅಷ್ಟೇ ಅಲ್ಲ ಪುತ್ತೂರಿನಿಂದಲೂ ಅನೇಕ ಮಂದಿ ಬಣ್ಣದ ಲೋಕದಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಕಲಾ ಕ್ಷೇತ್ರದಲ್ಲಿ ತನ್ನ ಪ್ರತಿಭೆ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ಹಳ್ಳಿಯ ಹುಡುಗಿಯೊಬ್ಬಳು ಸಖತ್ ಸದ್ದು ಮಾಡುತ್ತಿದ್ದಾಳೆ. ಅವಳು ಬೇರಾರೂ ಅಲ್ಲ, ಪುತ್ತೂರು ತಾಲೂಕು ಸರ್ವೆ ಗ್ರಾಮದ ಬೊಟ್ಯಾಡಿಯ ಶ್ರೀಮಾ.
ಉದಯೋನ್ಮುಖ ಪ್ರತಿಭೆ ಶ್ರೀಮಾ ಬೊಟ್ಯಾಡಿ ಅವರು ನಟಿಸಿರುವ ‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್ ಅ.20ರಂದು ಮಂಗಳೂರು ಕೂಳೂರಿನಲ್ಲಿ ಬಿಡುಗಡೆಗೊಂಡಿತು. ಕಾಂತಾರ ಚಿತ್ರದಲ್ಲಿ ಗುರುವ ಪಾತ್ರದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿಯವರು ತುಳು ಕವರ್ ಸಾಂಗ್‌ನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸ್ವರಾಜ್ ಶೆಟ್ಟಿಯವರು ಶ್ರೀಮಾ ಅವರ ‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್ ಬಹಳ ಚೆನ್ನಾಗಿದೆ, ನೋಡಿ ಬಹಳ ಖುಷಿಯಾಯಿತು. ಇವರ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರೂ ಇದನ್ನು ವೀಕ್ಷಿಸಿ ಯೂಟ್ಯೂಬ್ ಚಾನೆಲ್‌ನ್ನು ಸಬ್‌ಸ್ಕ್ರೈಬ್ ಮಾಡುವ ಮೂಲಕ ಇವರಿಗೆ ಸಪೋರ್ಟ್ ಮಾಡಬೇಕು ಎಂದು ಹೇಳಿದರು.
‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್‌ಗೆ ಸುಪ್ರೀತ್ ಅವರು ವಿಡಿಯೋ ಎಡಿಟಿಂಗ್ ಮಾಡಿದ್ದು ಶ್ರುತಿಯವರು ಮೇಕಪ್ ಮಾಡಿದ್ದಾರೆ. ಮಿಥುನ್ ರಾಜ್ ರೆಕಾರ್ಡಿಂಗ್ ಮಾಡಿದ್ದಾರೆ.

ಶ್ರೀಮಾ ಅವರು ನಟಿಸಿರುವ ‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್‌ಗೆ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದು ‘ಶ್ರೀಮಾ’ಸ್ ಹಬ್’ ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಸಾವಿರಾರು ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀಮಾ ಅವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬೊಟ್ಯಾಡಿ ಎಂಬಲ್ಲಿನ ಪ್ರತಿಭೆಯಾಗಿದ್ದು ಈ ಹಿಂದೆಯೂ ಅನೇಕ ಆಲ್ಬಂ ಸಾಂಗ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸಿನಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳೂ ಇವರನ್ನು ಹುಡುಕಿ ಬಂದಿದೆ.
ಈ ಹಿಂದೆ ಸುವರ್ಣ ಸೂಪರ್ ಸ್ಟಾರ್‌ಲ್ಲಿ ಭಾಗವಹಿಸಿದ್ದ ಇವರು ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಟ್ಟ ಸೂಪರ್ ಮಿನಿಟ್ ರಿಯಾಲಿಟಿ ಶೊದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ‘ಮೋಕೆದ ಪೂ’ ಇವರ ಮೊದಲ ಆಲ್ಬಂ ಸಾಂಗ್ ಆಗಿದ್ದು ಆ ಬಳಿಕ ಅನೇಕ ಆಲ್ಬಂ ಸಾಂಗ್‌ಗಳನ್ನು ಮಾಡುತ್ತಾ ಬಂದಿದ್ದಾರೆ. ಇವೆಂಟ್ ಕಾರ್ಯಕ್ರಮಗಳಲ್ಲಿ ಆಕರ್ಷಕ ಶೈಲಿಯಲ್ಲಿ ಆಂಕರಿಂಗ್ ಮಾಡುವ ಶ್ರೀಮಾ ಅವರು ಕನ್ನಡ, ತುಳು ಮತ್ತು ಇಂಗ್ಲೀಷ್‌ನಲ್ಲಿ ಆಂಕರಿಂಗ್ ಮಾಡುತ್ತಾರೆ.
ಶ್ರೀಮಾ ಅವರ ‘ನಿರಲಾಯೆ ನಿನ್ನಾ’ ತುಳು ಕವರ್ ಸಾಂಗ್ Shreema’s Hub ಯೂ ಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಅಥವಾ https://youtu.be/xzRzKX-q87kಈ ಲಿಂಕ್ ಮೂಲಕ ನೋಡಬಹುದು.

 

 

LEAVE A REPLY

Please enter your comment!
Please enter your name here