ಪುತ್ತೂರು: ಅರಿಯಡ್ಕ ಕೌಡಿಚ್ಚಾರ್‌ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ‘ತಲೈ-ಪೊಲ್ಲೈ’ ಜೂಜಾಟವಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೂಜಾಟಕ್ಕೆ ಬಳಸಿದ ರೂ.7222 ವಶಪಡಿಸಿಕೊಂಡಿದ್ದಾರೆ.
ಜ್ಞಾನ ಪ್ರಕಾಶ್,ಗೋಪಾಲಕೃಷ್ಣ,ವನರಾಜ್, ರವೀಂದ್ರ,ಗೋವಿಂದ,ಉದಯ ಕುಮಾರ್ ಮತ್ತು ಸುಧಾಕರ್ ಬಂಧಿತ ಆರೋಪಿಗಳು.
ಅ.24ರಂದು ಪುತ್ತೂರು ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಾಮಕೃಷ್ಣರವರು ರೌಂಡ್ಸ್ ಕರ್ತವ್ಯದಲ್ಲಿ ಕುಂಬ್ರದಲ್ಲಿರುವ ಸಮಯ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಕೌಡಿಚ್ಚಾರ್ ಸಿಆರ್‌ಸಿಯಲ್ಲಿ ಸಾರ್ವಜನಿಕ ಮೈದಾನದಲ್ಲಿ ಈ ಆಟ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಸಂಪ್ಯ ಠಾಣಾ ಎಸ್.ಐ.ಉದಯರವಿಯವರ ಮಾರ್ಗದರ್ಶನದಲ್ಲಿ ಎಸ್.ಐ.ರಾಮಕೃಷ್ಣ, ಹೆಡ್ ಕಾನ್‌ಸ್ಟೇಬಲ್‌ಗಳಾದ ಸತೀಶ್, ಹರೀಶ್, ಕಾನ್‌ಸ್ಟೇಬಲ್‌ಗಳಾದ ಶಿವಾನಂದ, ಗಿರೀಶ, ಪ್ರೊಬೇಷನರಿ ಎಸ್.ಐ.ಗಳಾದ ಕಾರ್ತಿಕ್ ಕೆ.,ಭವಾನಿ ಹಾಗೂ ಚಾಲಕ ಸದ್ದಾಂ ಮುಲ್ಲಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.