ಪುಂಜಾಲಕಟ್ಟೆಯಿಂದ ನಾಪತ್ತೆಯಾಗಿದ್ದ ಬಾಲಕಿ ಉಪ್ಪಿನಂಗಡಿಯಲ್ಲಿ ಪತ್ತೆ ಪ್ರಕರಣಕ್ಕೆ ತಿರುವು ; ನೌಶಾದ್ ವಿರುದ್ಧ ಪೊಕ್ಸೋ ಪ್ರಕರಣ

0

ಬಂಟ್ವಾಳ : ಪುಂಜಾಲಕಟ್ಟೆಯಿಂದ ನಾಪತ್ತೆಯಾಗಿದ್ದ ಬಾಲಕಿ ಉಪ್ಪಿನಂಗಡಿಯಲ್ಲಿ ಯುವಕನೊಂದಿಗೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ, ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯವೆಸಗಿದ ಬಗ್ಗೆ ಸಾಕ್ಷ್ಯವನ್ನು ಆಧರಿಸಿ ಆರೋಪಿ ಮೇಲೆ ಪೊಕ್ಸೋ ಪ್ರಕರಣ ದಾಖಲಿಸಲಾಗಿದೆ.

ಪಾಂಡವರಕಲ್ಲು ನಿವಾಸಿ ನೌಶಾದ್ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ಪಾಂಡವರಕಲ್ಲು ಎಂಬಲ್ಲಿನ ಹತ್ತನೇ ತರಗತಿ ಬಾಲಕಿಯೋರ್ವರು ಕಾಣೆಯಾಗಿದ್ದ ಬಗ್ಗೆ ಹೆತ್ತವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಆರಂಭಿಕವಾಗಿ ದೂರು ನೀಡಿದ್ದು, ಕಿಡ್ನಾಪ್ ಪ್ರಕರಣ ದಾಖಲಾಗಿತ್ತು.

ಬಳಿಕ ಆಕೆ ಪರಿಚಯಸ್ಥ ನೌಶಾದ್ ಜೊತೆ ಪತ್ತೆಯಾಗಿದ್ದರು. ಬಳಿಕದ ಬೆಳವಣಿಗೆಯಲ್ಲಿ ಆಕೆಯನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿತ್ತು. ಇದೀಗ ವೈದ್ಯಕೀಯ ತಪಾಸಣೆಯ ಬಳಿಕ, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಪುಂಜಾಲಕಟ್ಟೆ ಪೋಲಿಸರು ನೌಶಾದ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here