ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೆಶ್ವರ ಮಹಾಕಾಳಿ ದೇವಾಲಯದಲ್ಲಿ ದೀಪಾವಳಿ ಹಬ್ಬ ಆಚರಣೆ

0

*ಸಹಸ್ರಾರು ದೀಪಗಳಿಂದ ಕಂಗೊಳಿಸಿದ ದೇವಸ್ಥಾನ*

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೆಶ್ವರ ಮಹಾಕಾಳಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಹಸ್ರಾರು ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ಅ.24ರ ರಾತ್ರಿ  ನಡೆಯಿತು.
ದೇವಾಲಯದ ಪ್ರಾಂಗಣದ ಸುತ್ತಲೂ ಅಳವಡಿಸಲಾದ ಮೂರು ಹಂತಸ್ತಿನ ದೀಪ ಗೋಪುರದಲ್ಲಿ ಹಣತೆಗಳನ್ನು ಇರಿಸಿ ದೇವಾಲಯದಿಂದ ಒದಗಿಸಲಾದ ಜ್ಯೋತಿಯಿಂದ ಭಕ್ತಾದಿಗಳು ದೀಪ ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯದ ಸುತ್ತು ಪ್ರಾಂಗಣ, ದೇವಾಲಯದ ಆವರಣದಲ್ಲಿರುವ ಅಶ್ವಥ ಕಟ್ಟೆಯಲ್ಲಿ ಬೆಳಗಿದ ಸಹಸ್ರಾರು ಹಣತೆಗಳು ಕಂಗೊಳಿಸುತ್ತಿತ್ತು. ಇದೇ ವೇಳೆ ದೇವಾಲಯದಲ್ಲಿ ಶ್ರೀ ದೇವರ ಬಲಿ ಉತ್ಸವವು ಪ್ರಾರಂಭಗೊಂಡು ವಿವಿಧ ವೈದಿಕ ವಿಧಿ ವಿಧಾನಗಳು ಜರುಗಿತು.
ಪರಿಣಾಮಕಾರಿಯಾದ ತುಡಾರ್ ಕಾರ್ಯಕ್ರಮ:
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೇತೃತ್ವದಲ್ಲಿ  ನಡೆದ ಕಾಲೋನಿಗಳಲ್ಲಿ ಸಾಮರಸ್ಯದ ದೀಪಾವಳಿ ತುಡರ್ ಎಂಬ ಕಾರ್ಯಕ್ರಮ ಸಮಾಜದೊಳಗಿನ ಅಂತರವನ್ನು ನಿವಾರಿಸುವಂತೆ ಪರಿಣಾಮ ಬೀರಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಸುನಿಲ್ ಆನಾವು, ಮಹೇಶ್ ಬಜತ್ತೂರು ಇವರುಗಳು ತುಡರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೇ ಭೋಜನ ಸ್ವೀಕರಿಸಿ ಸಹೋದರತ್ವವನ್ನು ಪ್ರಕಟಿಕರಿಸಿದ್ದರು.
ಇವರ ಈ ನಡೆಯನ್ನು ಗುರುತಿಸಿ ಗೌರವಿಸಿದ ಎರಡೂ ಕಾಲೋನಿಗಳ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವಾಲಯದ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಹಣತೆಗಳನ್ನು ಬೆಳಗಿಸಲು ಉತ್ಸಾಹದಿಂದ ಮುಂದಾಗಿರುವುದು ವಿಷೇಶತೆಯಾಗಿತ್ತು.

LEAVE A REPLY

Please enter your comment!
Please enter your name here