ನಿಡ್ಪಳ್ಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಒದಗಿಸಿಕೊಡುವಂತೆ ಆಗ್ರಹಿಸಿ ಕೃಷ್ಣ ನಿಡ್ಪಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

0

ಪುತ್ತೂರು: ನಿಡ್ಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗೊಳ್ಳುವ ಅಂಬೇಡ್ಕರ್ ಭವನಕ್ಕೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಒದಗಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕೃಷ್ಣ ನಿಡ್ಪಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ನಿಡ್ನಳ್ಳಿ ಗ್ರಾಮದ ಸ.ನಂಬ್ರ 123 /1P2 ಮತ್ತು 123 /1PAಯಲ್ಲಿ 0.18 ಎಕ್ರೆ ಆಸ್ತಿಯು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ಪಹಣಿ ದಾಖಲಾಗಿರುತ್ತದೆ. ಸದ್ರಿ ಭವನ ನಿರ್ಮಾಣಕ್ಕೆ ರೂ. 75,೦೦,೦೦೦/- ಅವಶ್ಯಕತೆ ಇದ್ದು, ಈಗಾಗಲೇ ಸರಕಾರದಿಂದ ರೂ. 20,೦೦,೦೦೦/ ಮಂಜೂರಾಗಿರುತ್ತದೆ. ಪ್ರಸಕ್ತ ಮಂಜೂರಾಗಿರುವ ಹಣವು ಈಗಿನ ಸಲಕರಣೆಗಳಗೆ, ಕೆಲಸ ಖರ್ಚು ವೆಚ್ಚಕ್ಕೆ ಸಾಕಾಗದ ಕಾರಣ ಮತ್ತು ಗ್ರಾಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರ ಸಮುದಾಯದವರಿದ್ದು, ಅಂಬೇಡ್ಕರ್ ಭವನವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿರುವ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಿದರು.
ಈ ಸಂದರ್ಭದಲ್ಲಿ ಸುಂದರ ಗೋಳಿತ್ತಡಿ, ಮೊಗೇರ ಸೇವಾ ಸಮಿತಿ ಜಿಲ್ಲಾ ಸಮಿತಿ ಸದಸ್ಯ ಕೊರಗಪ್ಪ ಈಶ್ವರಮಂಗಲ ಮತ್ತಿತರರು ಉಪಸ್ಥಿತರಿದ್ದರು.

ಹೋರಾಟದ ಫಲವಾಗಿ ಅಂಬೇಡ್ಕರ್ ಭವನ ಮಂಜೂರಾಗಿದೆ-ಕೃಷ್ಣ ನಿಡ್ಪಳ್ಳಿ
ನಿಡ್ಪಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆನ್ನುವುದು ನಮ್ಮೆಲ್ಲರ ಬಹುಕಾಲದ ಕನಸಾಗಿದ್ದು ಅದಕ್ಕಾಗಿ ಅನೇಕ ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ. ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆನ್ನುವ ವಿಚಾರದಲ್ಲಿ ಗ್ರಾಮದ ದಲಿತ ಸಮುದಾಯದ ಮುಖಂಡರು, ಗ್ರಾಮಸ್ಥರು ನಮ್ಮ ಜೊತೆ ಕೈಜೋಡಿಸಿದ್ದರು. ನಮ್ಮೆಲ್ಲರ ಬೇಡಿಕೆ ಮತ್ತು ಹೋರಾಟ ಫಲವಾಗಿ ಅಂಬೇಡ್ಕರ್ ಭನವ ಮಂಜೂರಾಗಿದ್ದು ಸರಕಾರದಿಂದ ರೂ.20 ಲಕ್ಷ ಅನುದಾನ ಮಂಜೂರಾಗಿದೆ ಎಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶ್ರಮಿಸಿದವರಲ್ಲಿ ಓರ್ವರಾಗಿರುವ ಸಾಮಾಜಿಕ ಕಾರ್ಯಕರ್ತ ಕೃಷ್ಣ ನಿಡ್ಪಳ್ಳಿ ತಿಳಿಸಿದ್ದಾರೆ. ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.75 ಲಕ್ಷ ಅವಶ್ಯಕತೆಯಿದ್ದು ಅದನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಒದಗಿಸುವಂತೆ ಕೇಳಿಕೊಂಡಿದ್ದೇವೆ. ಅಂಬೇಡ್ಕರ್ ಭವನದ ವಿಚಾರದಲ್ಲಿ ಹೋರಾಟ ನಡೆಸಿದ ಎಲ್ಲ ಮುಖಂಡರಿಗೆ, ಸಮುದಾಯದ ಜನತೆಗೆ ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕೃಷ್ಣ ನಿಡ್ಪಳ್ಳಿ ತಿಳಿಸಿದರು.

LEAVE A REPLY

Please enter your comment!
Please enter your name here