ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮದ ಕುಸುಮಾವತಿ ರೈ ಎಂಬವರು ತನ್ನ ಜಾಗದಲ್ಲಿ ಯಾವುದೇ ಕೃಷಿ ಇಲ್ಲದೆ ಇದ್ದರೂ ಸದ್ರಿ ಜಮೀನಿನಲ್ಲಿ ಅಡಿಕೆ ಕೃಷಿ ಇದೆ ಎಂದು ಕಂದಾಯ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಪಹಣಿಯಲ್ಲಿ ದಾಖಲಿಸಿಕೊಂಡು ಉಪ್ಪಿನಂಗಡಿ ಸಹಕಾರಿ ಸಂಘದಿಂದ ಕೃಷಿ ಸಾಲ ಮತ್ತು ಬೆಳೆ ವಿಮೆ ಪಡೆದುಕೊಂಡು ಸರಕಾರಕ್ಕೆ ಮತ್ತು ಸಹಕಾರಿ ಸಂಘಕ್ಕೆ ವಂಚನೆ ಮಾಡಿದ್ದಾರೆ ಎಂದು 34-ನೆಕ್ಕಿಲಾಡಿ ಗ್ರಾಮದ ಅಲಿಮಾರ ನಿವಾಸಿ ರಾಧಾಕೃಷ್ಣ ರೈ ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ಮತ್ತು ಪುತ್ತೂರು ಉಪ
ವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ.
ಆ ಜಾಗವು ಕಾನೂನು ನ್ಯಾಯಾಲಯದಲ್ಲಿ ವ್ಯಾಜ್ಯ ದಾವೆ ಇದ್ದು, ಮುಂದಿನ ಆದೇಶದ ವರೆಗೆ ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪಡೆದಿರುವ ಸರ್ಕಾರಿ
ಸವಲತ್ತುಗಳನ್ನು ಮರಳಿ ಸರ್ಕಾರಕ್ಕೆ ಹಿಂಪಡೆಯುವಂತೆ ದೂರಿನಲ್ಲಿ ತಿಳಿಸಲಾಗಿದೆ.
Home ಗ್ರಾಮವಾರು ಸುದ್ದಿ ನೆಕ್ಕಿಲಾಡಿ: ಕೃಷಿ ಇದೆಯೆಂದು ಸುಳ್ಳು ದಾಖಲೆ ಸೃಷ್ಟಿಸಿ ಸಹಕಾರಿ ಸಂಘದಿಂದ ೦% ಸಾಲ, ಬೆಳೆ ವಿಮೆ...