ಅ.30ರಂದು ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕದ ವತಿಯಿಂದ 5ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ

0

ಪುತ್ತೂರು:’ಕಳೆದ ನಾಲ್ಕು ವರ್ಷಗಳ ಹಿಂದೆ 6ಜನರೊಂದಿಗೆ ಪ್ರಾರಂಭವಾದ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇಂದು 60 ಸದಸ್ಯ ಬಲದೊಂದಿಗೆ ಯಶಸ್ವಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಈ ಸಂದರ್ಭದಲ್ಲಿ ಅ.30ರಂದು ಮಜ್ಜಾರು ಗದ್ದೆಯಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ’ಎಂದು ಶ್ರೀ ವಿಷ್ಣು ಬಳಗ ಮಜ್ಜಾರಡ್ಕದ ಪ್ರಧಾನ ಕಾರ್ಯದರ್ಶಿ ಭವಿತ್ ಮಜ್ಜಾರು ಹೇಳಿದರು.
ಅವರು ಅ.28ರಂದು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಬೆಳಗ್ಗೆ 8ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು ಅಧ್ಯಕ್ಷತೆ ವಹಿಸಲಿದ್ದಾರೆ.ಅರಿಯಡ್ಕ ಶ್ರೀ ಧೂಮಾವರಿ ದೈವದ ಪ್ರಧಾನ ಪಾತ್ರಿ ಸದಾಶಿವ ಮಣಿಯಾಣಿ ಕುತ್ಯಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು,ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಧಾಕೃಷ್ಣ ಬಿ.ಪೆರ್ನೆ,ಅರಿಯಡ್ಕ ಗ್ರಾ.ಪಂ ಸದಸ್ಯರಾದ ರಾಜೇಶ್ ಮಣಿಯಾಣಿ,ಉಷಾರೇಖಾ.ರೈ ಹಾಗೂ ಮಜ್ಜಾರಡ್ಕ ಶ್ರೀ ಯುವಶಕ್ತಿ ಬಳಗದ ಅಧ್ಯಕ್ಷ ಉದಯ ಕುಮಾರ್ ಸ್ವಾಮಿನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಸಮಾರೋಪ ಸಮಾರಂಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ,ರಾಜ್ ಸೌಂಡ್ಸ್&ಲೈಟ್ಸ್ ಚಿತ್ರದ ನಟ ವಿನೀತ್ ಕುಮಾರ್,ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ,ಕಾಂತಾರ ಚಲನಚಿತ್ರದ ನಟ ಸ್ವರಾಜ್ ಶೆಟ್ಟಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ರೈ ಎಸ್ಟೇಟ್ ಕೋಡಿಂಬಾಡಿಯ ಅಶೋಕ್ ಕುಮಾರ್ ರೈ,ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವ ಸಲಹೆಗಾರ ಕಿಶೋರ್ ಶೆಟ್ಟಿ ಅರಿಯಡ್ಕ,ಪುತ್ತೂರಿನ ಪದ್ಮ ಶ್ರೀ ಸೋಲಾರ್ ಸಿಸ್ಟಮ್ ಮಾಲಕ ಸೀತರಾಮ.ರೈ ಕೆದಂಬಾಡಿಗುತ್ತು,ರಾಮಜಾಲು ಬ್ರಹ್ಮಬೈದರ್ಕಳ ಗರಡಿಯ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು,ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್,ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ಉದಯ ಕುಮಾರ್ ಸ್ವಾಮಿನಗರ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದರೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್,ಶ್ವಾನ ಪ್ರೇಮಿ ರಜನಿ ದಾಮೋದರ ಶೆಟ್ಟಿ ಬಳ್ಳಾಲ್ ಬಾಗ್,ಬಿರುಮಲೆಯ ಪ್ರಜ್ಞಾ ಮಾನಸಿಕ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ಜ್ಯೋತಿ ಮತ್ತು ಅಣ್ಣಪ್ಪ ದಂಪತಿಗಳನ್ನು ಹಾಗೂ ಡ್ರಾಮ ಜೂನಿಯರ್ ಸೀಸನ್-4 ಸೆಕೆಂಡ್ ರನ್ನರ್ ಅಪ್ ಮಾಸ್ಟರ್ ವೇದಿಕ್ ಕೌಶಲ್ ರನ್ನು ವಿವಿಧ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವಿಸಲಾಗುವುದು ಎಂದರು.

ಆಟೋಟ ಸ್ಪರ್ದೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಐದನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಬೆಳಗ್ಗೆ 9ರಿಂದ ವಿವಿಧ ಆಟೋಟ ಸ್ಪರ್ದೆಗಳು ಸ್ಥಳೀಯರಿಗಾಗಿ ನಡೆಯಲಿದ್ದು ಪುರುಷರಿಗೆ ಮುಕ್ತ ಹಗ್ಗಜಗ್ಗಾಟ ಸ್ಪರ್ದೆ ನಡೆಯಲಿದೆ.ಅ.29ರಂದು ಮಧ್ಯಾಹ್ನ 3 ಗಂಟೆಯಿಂದ ಸ್ಥಳೀಯರಿಗೆ ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಾಟ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ರಿಂದ ದೀರ್ಘ ಡ್ಯಾನ್ಸ್ ಅಕಾಡೆಮಿ ಸುರತ್ಕಲ್ ಇದರ ಸದಸ್ಯರಿಂದ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9.30ರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮಣಿಕಂಠ ಮಹಿಮೆ ನಾಟಕ ಮೋಹನ್ ರೈ ಓಲೆಮುಂಡೋವು ಹಾಗೂ ಮನ್ಮಿತ್.ರೈ ಓಲೆಮುಂಡೋವು ಪ್ರಾಯೋಜಕತ್ವ ದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಭವಿತ್ ಮಜ್ಜಾರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕದ ಅಧ್ಯಕ್ಷ ಉದಯಕುಮಾರ್ ಸ್ವಾಮಿನಗರ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ಗೋಳ್ತಿಲ ಉಪಸ್ಥಿತರಿದ್ದರು.