ರಾಮಕುಂಜ ಮಹಾವಿದ್ಯಾಲಯದಲ್ಲಿ ಕೋಟಿ ಕಂಠ ಗೀತ ಗಾಯನ

0


ರಾಮಕುಂಜ: ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಕೋಟಿ ಕಂಠ ಗೀತ ಗಾಯನ ಅ.೨೮ರಂದು ಬೆಳಿಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆಯವರು, ಕನ್ನಡ ನಾಡು ಭಾರತಾಂಬೆಯ ಹೆಮ್ಮೆಯ ಕುವರಿ. ಇಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಎಲ್ಲವನ್ನೂ ನಾವು ಅಭಿಮಾನದಿಂದ ಕಾಣಬೇಕು. ಇವುಗಳ ಉನ್ನತಿಗೆ ಒಂದಾಗಿ ದುಡಿಯಬೇಕು. ನಮ್ಮೆಲ್ಲ ಒಕ್ಕೊರಲ ಹಾಡು ಐಕ್ಯದ ಸಂಕೇತ. ಸರ್ವರ ಉನ್ನತಿಗೆ ಶ್ರಮಿಸೋಣ ಎಂದು ಹೇಳಿದರು. ಗಾಯನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here