ಉಪ್ಪಿನಂಗಡಿ: ನಟ್ಟಿಬೈಲಿನಲ್ಲಿ ಆಶಿ ಅಡಿಟೋರಿಯಂ ಶುಭಾರಂಭ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಪುತ್ತೂರು ಹಾಗೂ ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅದಿತಿ ಪ್ಲಾಸ್ಟಿಕ್ ಹಾಗೂ ವಿನಾಯಕ ಟ್ರೇಡರ್‍ಸ್‌ರವರ ಸಹಸಂಸ್ಥೆ ಆಶಿ ಅಡಿಟೋರಿಯಂ ಅ.30ರಂದು ಉಪ್ಪಿನಂಗಡಿಯ ನಟ್ಟಿಬೈಲು ವಿನಾಯಕ ಕಾಂಪ್ಲೆಕ್ಸ್‌ನಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.


ಅಡಿಟೋರಿಯಂನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು ಗ್ರಾಹಕರ ಅನುಕೂಲಕ್ಕಾಗಿ ವೆಜ್ ಹಾಗೂ ನಾನ್‌ವೆಜ್ ಕ್ಯಾಟರಿಂಗ್ ವ್ಯವಸ್ಥೆ ಇದೆ. ಮದುವೆ, ಹುಟ್ಟುಹಬ್ಬ, ಸೀಮಂತ, ನಿಶ್ಚಿತಾರ್ಥ ಹಾಗೂ ಇನ್ನಿತರ ಶುಭ ಸಭೆ ಸಮಾರಂಭಗಳಿಗೆ ಮಿತದರದಲ್ಲಿ ಸಭಾಭವನವನ್ನು ಒದಗಿಸಲಾಗುವುದು ಎಂದು ಮಾಲಕ ನವೀನ್ ಶೆಟ್ಟಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here