ಪುತ್ತೂರು; ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ದಾರಂದ ಮಹೂರ್ತವು ಅ.31ರಂದು ಬೆಳಿಗ್ಗೆ ವೈದಿಕ ವಿಧಿ ವಿಧಾನದೊಂದಿಗೆ ನೆರವೇರಿತು.
ಅರ್ಚಕ ನಾಗೇಶ್ ಕುದ್ರೆತ್ತಾಯರವರು ಧಾರ್ಮಿಕ ವಿಧಿ ನೆರವೇರಿಸಿದರು. ದೈವಸ್ಥಾನದ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರದಾನ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿ ಅನಿಲ್ ಕಣ್ಣಾರ್ನೂಜಿ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ್ ರೈ ಬಳ್ಳಮಜಲು, ಕುರಿಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಧು ನರಿಯೂರ್, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮುರಳಿಧರ ಭಟ್ ಬಂಗಾರಡ್ಕ, ಶಿಲ್ಪಿ ಪ್ರಶಾಂತ್ ಆಚಾರ್ಯ, ದುಗ್ಗಪ್ಪ ಅಜಿಲ, ಪಟ್ಟೆ ಸದಾಶಿವ ಶೆಟ್ಟಿ, ರಘುನಾಥ್ ಶೆಟ್ಟಿ ಪೋನೋನಿ, ವಸಂತ್ ರೈ, ಬಾಲಕೃಷ್ಣ ಶೆಟ್ಟಿ ಪಟ್ಟೆ, ಬಾಲಕೃಷ್ಣ ಪೊಳಲಿ, ಸೀತಾರಾಮ ಶೆಟ್ಟಿ, ರಾಮಣ್ಣ ಗೌಡ ಕಡ್ಯ, ನವೀನ್ ರೈ ಪಂಜಳ, ಆನಂದ ನಾಯ್ಕ್, ಬಾಲಸುಬ್ರಮಣ್ಯ ಭಟ್, ಶೀನಪ್ಪ ಪೂಜಾರಿ, ಧನಂಜಯ, ಬಾಲಕೃಷ್ಣ ಶೆಟ್ಟಿ, ವಿನೋದ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪಂಜಳ, ಸೀತಾರಾಮ್ ಆಚಾರಿ, ಉಮೇಶ್ ಗುತ್ತಿನಪಾಲು, ಚಂದ್ರಹಾಸ ಉದಯಗಿರಿ, ಕೃಷ್ಣಪ್ಪ, ರಾಮ ದಂಡನಕುಕ್ಕು, ದೇವದಾಸ, ಪ್ರವೀಣ್ ಮುಲಾರ್, ಮೋಹನ ನಾಯ್ಕ್ ಸೇರಿದಂತೆ ಹಲವಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.