ಪುತ್ತೂರು: ಮಕ್ಕಳು ಅಲ್ಲಾಹು ನೀಡಿದ ಮಹಾ ಸಂಪತ್ತಾಗಿದ್ದು ಸಹಪಾಠಿ ಅಥವಾ ಸ್ನೇಹಿತರ ಹೆಸರಿನಲ್ಲಿ ಮಕ್ಕಳು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕೆಂದು ಸುನ್ನೀ ಜಂಇಯ್ಯತ್ತುಲ್ ಉಲಮಾ ಜಿಲ್ಲಾಧ್ಯಕ ಮುಹಮ್ಮದಲೀ ಫೈಝಿ ಬಾಳೆಪುಣಿ ಹೇಳಿದರು.
ಸಂಪ್ಯ ಬ್ರಾಂಚ್ ಎಸ್.ವೈ.ಎಸ್ ಹಾಗೂ ಯುನಿಟ್ ಎಸ್ಸೆಸ್ಸೆಫ್ ಜಂಟಿಯಾಗಿ ಆಯೋಜಿಸಿದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಯೂನಿಟ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ವೈ.ಎಸ್ ಸಂಪ್ಯ ಬ್ರಾಂಚ್ ಅಧ್ಯಕ್ಷ ಅಬ್ದುರ್ರಝಾಕ್ ವಾಗ್ಲೆ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕೆ.ಸಿ.ಎಫ್. ನಾಯಕ ಅಬ್ದುರ್ರಶೀದ್ ಮದನಿ ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಮೊದಲು ತಾಜುಲ್ ಉಲಮಾ ಮೌಲಿದ್ ಪಾರಾಯಣವನ್ನು ಕೆ.ಸಿ.ಎಫ್. ಅಬುಧಾಬಿ ಝೋನ್ ನಾಯಕ ಮೂಸಾ ಮದನಿ ನೇತೃತ್ವದಲ್ಲಿ ನಡೆಸಲಾಯಿತು. ಬಳಿಕ ನಡೆದ ಯೂನಿಟ್ ಕಾನ್ಫರೆನ್ಸ್‌ನಲ್ಲಿ ಯೂನಿಟ್ ವ್ಯಾಪ್ತಿಯ ಸುಮಾರು ಎಪ್ಪತ್ತರಷ್ಟು ವಿದ್ಯಾರ್ಥಿಗಳು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಪುತ್ತೂರು ಸೆಂಟರ್ ಅಧ್ಯಕ್ಷ ಅಬೂ ಶಝಾ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ, ಸೆಂಟರ್ ನಾಯಕರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಸೆಂಟ್ಯಾರು, ಎಸ್.ವೈ.ಎಸ್. ನಾಯಕರಾದ ಇಬ್ರಾಹಿಂ ವಾಗ್ಲೆ, ಅಬೂಬಕರ್ ಹಾಜಿ, ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಸಂಟ್ಯಾರು, ಎ.ಪಿ ಅಬೂಬಕರ್, ಮುಹಮ್ಮದ್ ಮದನಿ ಕಮ್ಮಾಡಿ, ಅಬ್ದುಲ್ ಜಬ್ಬಾರ್ ವಾಗ್ಲೆ, ಯಾಸೀನ್ ಸಅದಿ ವಿಟ್ಲ, ಅಶ್ರಫ್ ಕಲ್ಲರ್ಪೆ, ಅಝೀಝ್ ಕಲ್ಲರ್ಪೆ, ಎಸ್.ಎಸ್ ಶೆರೀಫ್, ಎಸ್ಸೆಸ್ಸೆಫ್ ನಾಯಕರಾದ ಬಿ.ಕೆ. ನೌಫಲ್, ರಾಝಿಕ್ ಕಲ್ಲರ್ಪೆ, ಮುಸ್ತಫ ವಾಗ್ಲೆ ಮುಂತಾದವರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ನಾಯಕರನ್ನು ಹಾಗೂ ಬಾಳೆಪುಣಿ ಉಸ್ತಾದರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಲಾಯಿತು.
ಎಸ್ಸೆಸ್ಸೆಫ್ ಯುನಿಟ್ ಅಧ್ಯಕ್ಷ ಬಿ.ಕೆ. ಯಾಸೀನ್ ಅಹ್ಸನಿ ಸ್ವಾಗತಿಸಿದರು. ಕೊಂಬಾಳಿ ಝುಹುರಿ ವಂದಿಸಿದರು. ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.