ನೆಲ್ಯಾಡಿ: ಐತ್ತೂರು ಗ್ರಾಮ ಪಂಚಾಯಿತಿಯಲ್ಲಿ ಗುಮಾಸ್ತೆಯಾಗಿದ್ದ ದೇವಿಕಾ ಎನ್.,ರವರಿಗೆ ಕಾರ್‍ಯದರ್ಶಿಯಾಗಿ ಭಡ್ತಿ ದೊರೆತಿದ್ದು ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದಾರೆ. ದೇವಿಕಾ ಅವರು 1994 ರಲ್ಲಿ ಐತ್ತೂರು ಗ್ರಾಮ ಪಂಚಾಯಿತಿಯಲ್ಲಿ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ್ದರು.
ಕಳೆದ 28 ವರ್ಷಗಳಿಂದ ಐತ್ತೂರು ಗ್ರಾಮ ಪಂಚಾಯಿತಿಯಲ್ಲಿ ಅವರು ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರಿಗೆ ಕಾರ್ಯದರ್ಶಿಯಾಗಿ ಮುಂಭಡ್ತಿ ಸಿಕ್ಕಿದ್ದು ಅ.12 ರಂದು ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಮುತ್ತುವೇಲ್ ಹಾಗೂ ಉನ್ನಾಮಲೈ ದಂಪತಿ ಪುತ್ರಿ. ದೇವಿಕಾರವರ ಪತಿ ರಾಮನಾಥನ್‌ರವರು ಎಸ್.ಕೆ.ಕೋ-ಆಪರೇಟಿವ್ ಎಂಪ್ಲಾಯಿಸ್ ಕೋ-ಆಪರೇಟಿವ್ ಸೊಸೈಟಿಯ ಪುತ್ತೂರು ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದಾರೆ.