ಪುತ್ತೂರು:ಕೂರ್ನಡ್ಕದಲ್ಲಿ ಇಬ್ಬರು ವ್ಯಕ್ತಿಗಳು ಮನೆಯೊಂದಕ್ಕೆ ನುಗ್ಗಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ನ.1ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಕೂರ್ನಡ್ಕ ಅಮ್ಮಬ್ಬ ಕಂಪೌಂಡ್ನ ಹಂಝ ಅವರ ಪುತ್ರ, ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಲ್ಮಾನ್ ಫಾರೀಸ್(15ವ)ಅವರು ಹಲ್ಲೆಗೊಳಗಾದವರು.‘ತಾನು ರಾತ್ರಿ ಮನೆಯಲ್ಲಿದ್ದಾಗ ಸಂಬಂಧಿ ಅಬ್ದುಲ್ ರವೂಫ್ ಎಂಬವರು ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಬಳಿಕ ಅಬ್ದುಲ್ ರವೂಫ್ ಮತ್ತು ಹಕೀಂ ಎಂಬವರು ಮನೆಗೆ ಅಕ್ರಮ ಪ್ರವೇಶಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭ ನನ್ನ ತಾಯಿ ಮತ್ತು ಚಿಕ್ಕಪ್ಪ ಅಲ್ಲಿಗೆ ಬರುತ್ತಿರುವುದನ್ನು ನೋಡಿ ಆರೋಪಿಗಳು ಓಡಿ ಹೋಗಿದ್ದಾರೆ’ ಎಂದು ಘಟನೆ ಕುರಿತು ಸಲ್ಮಾನ್ ಫಾರೀಸ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.